ರಾಬರ್ಟ್ ಚಿತ್ರ ಶುರುವಾಗಿದೆ. ದರ್ಶನ್, ತರುಣ್ ಸುಧೀರ್, ಉಮಾಪತಿ ಕಾಂಬಿನೇಷನ್ನಿನ ಸಿನಿಮಾ ಇದು. ಒಂದೇ ಒಂದು ಪೋಸ್ಟರ್‍ನಿಂದ ಸಂಚಲನ ಸೃಷ್ಟಿಸಿದ್ದ ತರುಣ್, ಚಿತ್ರದ ಚಿತ್ರೀಕರಣಕ್ಕೆ ಭರ್ಜರಿಯಾಗಿ ರೆಡಿಯಾಗಿದ್ದಾರೆ.
ಕಥೆ, ದರ್ಶನ್ ಅವರಿಗೆ ಹೇಳಿ ಮಾಡಿಸಿದ ಹಾಗಿದೆ ಎಂದಿರೋ ತರುಣ್, ಚಿತ್ರದ ಕಥೆ, ಚಿತ್ರಕಥೆಗಾಗಿ 2 ವರ್ಷ ಸಮಯ ತೆಗೆದುಕೊಂಡಿದ್ದಾರೆ. ದರ್ಶನ್ ಕೂಡಾ ಪಾತ್ರಕ್ಕಾಗಿ ತಯಾರಿ ಆರಂಭಿಸಿದ್ದು, ಅದರ ಮೊದಲ ಹಂತವಾಗಿ ಅನ್ನವನ್ನು ತ್ಯಾಗ ಮಾಡಿದ್ದಾರೆ. ಫಿಟ್‍ನೆಸ್ ಮುಖ್ಯ.
ಇನ್ನು ಚಿತ್ರಕ್ಕೆ ಹೀರೋಯಿನ್ ಐಶ್ವರ್ಯಾ ರೈ ಎಂಬ ಅಂತೆಕಂತೆಗಳನ್ನೆಲ್ಲ ಒಂದೇ ಏಟಿಗೆ ತಳ್ಳಿ ಹಾಕಿದೆ ಚಿತ್ರತಂಡ.