ಯಾವುದೇ ಸಿನಿಮಾ ಇರಲಿ.. ಹೀರೋಗೆ ಇರೋ ಗೌರವವೇ ಬೇರೆ. ಹೀರೋ ಅಂದ್ರೆ ಹೀರೋನೇ.. ಕೆಲವು ಚಿತ್ರಗಳಲ್ಲಿ ವಿಲನ್ ಅಬ್ಬರಿಸುವುದೂ ಇದೆ. ಆದರೆ, ಅಂತಿಮ ಗೆಲುವು ಹೀರೋಗೇ ಹೊರತು ವಿಲನ್‍ಗೆ ಅಲ್ಲ... ಹಾಗಾದರೆ, ಈ ಇಬ್ಬರಲ್ಲಿ ಯಾರು ಗ್ರೇಟ್..? ಈ ಪ್ರಶ್ನೆ ಎದುರಾಗಿರುವುದು ಕಿಚ್ಚ ಸುದೀಪ್‍ಗೆ.
ಕಾರಣ ಎಲ್ಲರಿಗೂ ಗೊತ್ತು. ಸುದೀಪ್, ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ಆದರೆ, ಹೊರಗಿನ ಭಾಷೆಯ ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದೇ ಹೆಚ್ಚು.
`ಹೀರೋ ಅಂದ್ರೆ ಒಳ್ಳೆಯವ ಎಂಬ ಭಾವನೆ ಬರುತ್ತೆ. ಆದರೆ, ಹೀರೋ ಒಳ್ಳೆಯವನಾಗೋಕೆ ವಿಲನ್ ಇದ್ದರಷ್ಟೇ ಸಾಧ್ಯ. ಹೀಗಾಗಿ ವಿಲನ್ ಕೂಡಾ ತುಂಬಾ ಮುಖ್ಯ' ಎಂದಿದ್ದಾರೆ ಸುದೀಪ್.
ದಭಾಂಗ್-3ಯಲ್ಲಿ ನಟಿಸುತ್ತಿರುವ ಸುದೀಪ್, ಚಿತ್ರದಲ್ಲಿ ನಟಿಸಲು ಉತ್ಸಾಹದಿಂದ ಇದ್ದೇನೆ. ನಿರ್ದೇಶಕರು ಕೇಳಿದ್ದನ್ನು ನಾನು ಕೊಡಲೇಬೇಕು.ಬಾಲಿವುಡ್ ಸೂಪರ್ ಸ್ಟಾರ್ ಜೊತೆ ಕೆಲಸ ಮಾಡುವುದು ಹೊಸ ಅನುಭವ. ಸೊಹೈಲ್ ಖಾನ್, ಸಲ್ಮಾನ್ ಖಾನ್, ಪ್ರಭುದೇವ ಅವರೆಲ್ಲ ಇರೋ ಟೀಂನಲ್ಲಿ ನಾನೂ ಒಬ್ಬ ಎನ್ನುವುದೇ ನನಗೆ ಖುಷಿ ಎಂದಿದ್ದಾರೆ ಸುದೀಪ್.