ಯೋಗರಾಜ್ ಭಟ್ಟರು ಮಳೆಗಾಲಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಈಗ ಮಳೆ ಬರಬೇಕು, ಕರುನಾಡು ಹಸಿರಾಗಬೇಕು, ತುಂತುರು ಮಳೆ ಹನಿಹನಿಯಾಗಿ ಸುರಿಯುತ್ತಿರಬೇಕು. ಮುಂಗಾರು ಮಳೆಯ ಲೀಲೆ ಶುರುವಾದರೆ, ಭಟ್ಟರ ಕ್ಯಾಮೆರಾ ಆನ್ ಆಗಲಿದೆ. ಅದು ಗಾಳಿಪಟ-2 ಚಿತ್ರಕ್ಕಾಗಿ.
ಗಾಳಿಪಟ-2 ಚಿತ್ರದ ಕಥೆ, ಸನ್ನಿವೇಶಗಳಿಗೆ ಮಳೆಯ ಅಗತ್ಯವಿದೆ. ಹಚ್ಚ ಹಸಿರಿನ ಪರಿಸರ ಬೇಕಿದೆ. ಸದ್ಯಕ್ಕೆ ಸೂರ್ಯ ಸುಡುಸುಡು ಕೆಂಡವಾಗಿದ್ದಾನೆ. ಹೀಗಾಗಿ ಭಟ್ಟರು ಗಾಳಿಪಟ-2 ಚಿತ್ರವನ್ನು ಶುರು ಮಾಡಲು ಮಳೆಗಾಲಕ್ಕೆ ಕಾಯುತ್ತಿದ್ದಾರೆ.
ಶರಣ್, ರಿಷಿ, ಪವನ್ ಕುಮಾರ್ ನಟಿಸುತ್ತಿರುವ ಚಿತ್ರದಲ್ಲಿ, ಸೋನಾಲ್ ಮಂಥೆರೋ(ಪಂಚತಂತ್ರ ಖ್ಯಾತಿ), ಶರ್ಮಿಳಾ ಮಾಂಡ್ರೆ ನಾಯಕಿಯರು. ಭಟ್ಟರ ಚಿತ್ರಕ್ಕೆ ಈ ಬಾರಿ ಅರ್ಜುನ್ ಜನ್ಯ ಸಂಗೀತವಿದ್ದು, ಮಹೇಶ್ ಚಿತ್ರದ ನಿರ್ಮಾಪಕರು.