ಜಾಕಿ ಭಾವನಾ, ಕನ್ನಡ ಚಿತ್ರರಂಗಕ್ಕೆ ಬಂದಿದ್ದು ಜಾಕಿ ಚಿತ್ರದ ಮೂಲಕ. ಅದಾದ ಮೇಲೆ ಭಾವನಾ, ಪುನೀತ್, ಸುದೀಪ್, ಗಣೇಶ್, ಉಪೇಂದ್ರ ಸೇರಿದಂತೆ ಹಲವು ಸ್ಟಾರ್‍ಗಳ ಜೊತೆ ನಟಿಸಿದ್ದಾರೆ. ಪುನೀತ್ ಜೊತೆ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದ್ದು. ಇದರ ನಡುವೆ ಮಲಯಾಳಂ, ತಮಿಳು, ತೆಲುಗಿನಲ್ಲೂ ಭಾವನಾ ನಟಿಸಿದ್ದಾರೆ. ಇಷ್ಟೆಲ್ಲದರ ನಡುವೆಯೂ ಭಾವನಾ ಇದುವರೆಗೆ ನಟಿಸಿರುವ ರಿಮೇಕ್ ಚಿತ್ರಗಳ ಸಂಖ್ಯೆ ಕೇವಲ 2.
ಹೌದು, ತೆರೆಗೆ ಬರಲು ಸಜ್ಜಾಗಿರುವ 99 ಸಿನಿಮಾ, ಭಾವನಾ ಅವರ 2ನೇ ರೀಮೇಕ್ ಚಿತ್ರವಂತೆ. ಮೊದಲನೆಯದ್ದು ಯಾರೇ ಕೂಗಾಡಲಿ. ನನಗೆ ಈ ಚಿತ್ರದ ಆಫರ್ ಬಂದಾಗ ವೊರಿಜಿನಲ್ 96 ಚಿತ್ರವನ್ನು ನೋಡಿರಲಿಲ್ಲ. ನೋಡಿದ ಮೇಲೆ ತ್ರಿಷಾ ಅವರ ಪಾತ್ರ ತುಂಬಾನೆ ಹಿಡಿಸಿಬಿಟ್ಟಿತು. ಅದೊಂದು ರೀತಿ ಮೆಚ್ಯೂರ್ಡ್ ಪಾತ್ರ ಎನ್ನುವ ಭಾವನಾಗೆ, ಪಾತ್ರದಲ್ಲಿ ಹಲವು ವಿಶೇಷತೆಗಳಿವೆ ಎನ್ನುವುದೇ ಇಷ್ಟವಾಯಿತಂತೆ.
ಮದುವೆ ಆದಮೇಲೆ ಮೊದಲಿಗಿಂತ ಹೆಚ್ಚು ಆಫರ್ ಬರುತ್ತಿವೆ ಎನ್ನುವ ಭಾವನಾ, 99 ಸಿನಿಮಾ ಪ್ಯೂರ್ ಎಮೋಷನ್ಸ್ ಮತ್ತು ಲವ್ ಫೀಲ್ ಇರುವ ಸಿನಿಮಾ. ಪ್ರತಿಯೊಬ್ಬರೂ ತಮ್ಮೊಂದಿಗೆ ಇಡೀ ಸಿನಿಮಾ ಕನೆಕ್ಟ್ ಮಾಡಿಕೊಳ್ತಾರೆ ಎನ್ನುತ್ತಾರೆ.
ಗಣೇಶ್ ಹೀರೋ ಆಗಿರುವ ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶನವಿದೆ. ರಾಮು ನಿರ್ಮಾಣದ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.