ಸಿಂಗ ಚಿತ್ರ ರಿಲೀಸ್‍ಗೂ ಮೊದಲೇ ಭರ್ಜರಿ ಸದ್ದು ಮಾಡ್ತಿದೆ. ಸಿಂಗ ಚಿತ್ರದ ಶ್ಯಾನೆ ಟಾಪಾಗವ್ಳೆ ಹಾಡು ಹಿಟ್ ಆಗಿದ್ದರ ಹಿಂದೆಯೇ, ಚಿತ್ರದ ಇನ್ನೊಂದು ಹಾಡು ಹೊರಬಿದ್ದಿದೆ. ಪುಟ್ಟ ಪುಟ್ಟ ಆಸೆ ನಮಗೆಲ್ಲ.. ಎಂದು ಶುರುವಾಗುವ ಹಾಡಿನಲ್ಲಿ, ನಾಯಕಿಯೇ ನಾಯಕನ ಮೇಲಿನ ಆಸೆ ಹೇಳಿಕೊಳ್ಳುವ ಸಾಹಿತ್ಯವಿದೆ. ಹಾಡು ಹಾಡಿರೋದು ಅನುರಾಧಾ ಭಟ್.
ಚಿರಂಜೀವಿ ಸರ್ಜಾ ಮೇಲೆ ಆದಿತಿ ಪ್ರಭುದೇವ ಕ್ರಷ್ ಹೇಳಿಕೊಳ್ಳೋ ಹಾಡಿಗೆ ಧರ್ಮವಿಶ್ ಸಂಗೀತವಿದೆ. ಉದಯ್ ಮೆಹ್ತಾ ನಿರ್ಮಾಣದ ಚಿತ್ರಕ್ಕೆ ವಿಜಯ್ ಕಿರಣ್ ನಿರ್ದೇಶಕ. ಹಾಡನ್ನು ರಿಲೀಸ್ ಮಾಡಿ ಶುಭ ಕೋರಿರುವುದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್.