ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಚಿತ್ರದಲ್ಲಿ ಹಲವು ವಿಶೇಷಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಮ್ಯೂಸಿಕಲ್ ಲವ್ ಸ್ಟೋರಿ ಮೂಲಕ ಅರ್ಜುನ್ ಜನ್ಯಾ ಸೆಂಚುರಿ ಸ್ಟಾರ್ ಆಗಿದ್ದಾರೆ. ಗಣೇಶ್‍ಗೆ ಹೀರೋಯಿನ್ ಆಗಿ ನಟಿಸಿರುವುದು ಜಾಕಿ ಭಾವನಾ. ಗಣೇಶ್ ಜೊತೆ ಇದು ಅವರ 2ನೇ ಸಿನಿಮಾ. ನಿರ್ದೇಶಕ ಪ್ರೀತಂ ಗುಬ್ಬಿ ಚಿತ್ರಕ್ಕೆ ಕನ್ನಡದ ಸ್ಪರ್ಶ ಕೊಟ್ಟಿದ್ದಾರೆ.
ಇದೆಲ್ಲದರ ಜೊತೆಗೆ 99, ಬೇರೆಯದೇ ದಾಖಲೆ ಬರೆಯುತ್ತಿದೆ. 99 ರಿಲೀಸ್ ಆಗುತ್ತಿರುವುದು ಮೇ 1ರಂದು. ಅಂದು ಬುಧವಾರ.
ಸಾಮಾನ್ಯವಾಗಿ ಕನ್ನಡ ಚಿತ್ರಗಳು ಗುರುವಾರ ಇಲ್ಲವೇ ಶುಕ್ರವಾರ ರಿಲೀಸ್ ಆಗುತ್ತವೆ. 2012ರಲ್ಲಿ ಪುನೀತ್-ಸೂರಿ ಕಾಂಬಿನೇಷನ್ನಿನ ಅಣ್ಣಾಬಾಂಡ್ ಸಿನಿಮಾ ಇದೇ ರೀತಿ, ಮೇ 1ರಂದು, ಬುಧವಾರವೇ ರಿಲೀಸ್ ಆಗಿತ್ತು. ಅದು ಬಿಟ್ಟರೆ, ಈಗ 99 ಅದೇ ದಾಖಲೆ ಬರೆಯುತ್ತಿದೆ.