ಗರ, ಆರ್.ಕೆ.ನಾರಾಯಣ್ ಅವರ ಕಿರುಕಥೆಯನ್ನಾಧರಿಸಿ ಮಾಡಿರುವ ಸಿನಿಮಾ. ಮುರಳೀಕೃಷ್ಣ ನಿರ್ದೇಶನದ ಈ ಚಿತ್ರ ಮುಂದಿನ ವಾರ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಸಾಧುಕೋಕಿಲ ಮತ್ತು ಜಾನಿ ಲಿವರ್.
ಬಾಲಿವುಡ್‍ನಲ್ಲಿ ಜಾನಿ ಲಿವರ್‍ಗೆ ಅವರದ್ದೇ ಆದ ಪ್ರತ್ಯೇಕ ಸ್ಥಾನಮಾನವಿದೆ. ಕನ್ನಡದಲ್ಲಿ ಅಂತಹ ಲೆವೆಲ್‍ನಲ್ಲಿರೋದು ಸಾಧು ಮಹಾರಾಜ್.
ಈ ಇಬ್ಬರೂ ಕಾಮಿಡಿಯನ್‍ಗಳು ಒಟ್ಟಿಗೇ ನಟಿಸಿರುವ ಚಿತ್ರ ಗರ. ಈ ಚಿತ್ರದಲ್ಲಿ ಇಬ್ಬರೂ ಜುಗಾರಿ ಬ್ರದರ್ಸ್ ಆಗಿ ನಟಿಸಿದ್ದು, ನಕ್ಕು ನಗಿಸಲು ಕಂಪ್ಲೀಟ್ ರೆಡಿಯಾಗಿದ್ದಾರೆ. ನಗೋಕೆ ನೀವು ರೆಡಿಯಾಗಿ.