ಡಾ.ರಾಜ್ ಹುಟ್ಟುಹಬ್ಬದಂದು ಮತ್ತೊಮ್ಮೆ ವಿಷ್ಣುವರ್ಧನ್ ಸ್ಮಾರಕ ಚರ್ಚೆ ಬಂದಿದೆ. ಅಂಬರೀಷ್ ಸ್ಮಾರಕದ ವಿಚಾರವೂ ಮುನ್ನೆಲೆಗೆ ಬಂದಿದೆ.
ರಾಜ್ ಮತ್ತು ವಿಷ್ಣುವರ್ಧನ್ ಸ್ಮಾರಕ ಮೊದಲು ಆಗಲಿ, ಆಮೇಲೆ ಅಂಬಿ ಸ್ಮಾರಕದ ಬಗ್ಗೆ ನೋಡೋಣ ಎಂದಿದ್ದಾರೆ ಸುಮಲತಾ ಅಂಬರೀಷ್. ಇದಕ್ಕಿಂತಲೂ ವಿಭಿನ್ನವಾದ ಆಲೋಚನೆ ಮುಂದಿಟ್ಟಿರುವುದು ಶಿವರಾಜ್‍ಕುಮಾರ್.
ರಾಜ್, ವಿಷ್ಣು ಮತ್ತು ಅಂಬರೀಷ್, ಮೂವರ ಸ್ಮಾರಕವೂ ಒಂದೇ ಕಡೆ ಇದ್ದರೆ ಚೆಂದ ಎಂದಿದ್ದಾರೆ ಶಿವಣ್ಣ. ಅದು ಈ ತ್ರಿಮೂರ್ತಿಗಳ ಗೆಳೆತನಕ್ಕೆ ನಾವು ನೀಡುವ ಉಡುಗೊರೆ ಎಂದಿದ್ದಾರೆ ಶಿವಣ್ಣ.