ಏಪ್ರಿಲ್ 24, ಡಾ.ರಾಜ್ ಹುಟ್ಟುಹಬ್ಬ. ವಿಶೇಷವೇನು ಗೊತ್ತೇ.. ಅದೇ ದಿನ ಅಂಬರೀಷ್ ಪುಣ್ಯಸ್ಮರಣೆ ದಿನವೂ ಹೌದು. ಅದು 5ನೇ ಮಾಸಿಕ ಪುಣ್ಯಸ್ಮರಣೆ. ಹೀಗಾಗಿಯೇ ಕಂಠೀರವ ಸ್ಟುಡಿಯೋದಲ್ಲಿ ಒಡಹುಟ್ಟಿದವರ ಅಭಿಮಾನಿಗಳ ಸೈನ್ಯವೇ ಜಮಾಯಿಸಿತ್ತು. ಇಬ್ಬರೂ ಮೇರುನಟರ ಸಮಾಧಿ ಸ್ಥಳವೂ ಒಂದೇ ಕಡೆ ಇರುವುದು ಕೂಡಾ ಇದಕ್ಕೆ ಕಾರಣ.
ಡಾ.ರಾಜ್ ಕುಟುಂಬ, ಸುಮಲತಾ ಅಂಬರೀಷ್, ರಾಕ್‍ಲೈನ್ ವೆಂಕಟೇಶ್, ಫಿಲಂ ಚೇಂಬರ್ ಅಧ್ಯಕ್ಷರಾದ ಚಿನ್ನೇಗೌಡ, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಚೇಂಬರ್‍ನ ಇತರೆ ಪದಾಧಿಕಾರಿಗಳು ಸೇರಿದಂತೆ ಹಲವರು ಡಾ.ರಾಜ್ ಮತ್ತು ಅಂಬಿ ಸಮಾಧಿಗೆ ನಮನ ಸಲ್ಲಿಸಿದರು.
ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಸಂಘಟನೆಗಳು ರಕ್ತದಾನ ಶಿಬಿರ, ಅನ್ನ ಸಂತರ್ಪಣೆ ಆಯೋಜಿಸಿದ್ದವು. ಸ್ವತಃ ಶಿವಣ್ಣ ಸೇರಿದಂತೆ ರಾಜ್ ಕುಟುಂಬ ಸದಸ್ಯರೂ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು. ಹಲವು ಅಭಿಮಾನಿಗಳು ಡಾ.ರಾಜ್ ಹೆಸರಲ್ಲಿ ನೇತ್ರದಾನ ಮಾಡಿದರು.ನ