ಕನ್ನಡದ ಸೂಪರ್ ಹಿಟ್ ಸಿನಿಮಾ ಮಫ್ತಿ, ತಮಿಳಿಗೆ ರೀಮೇಕ್ ಆಗುತ್ತಿದೆ. ಮಫ್ತಿಯ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ನರ್ತನ್ ಅವರೇ, ತಮಿಳಿನಲ್ಲೂ ಡೈರೆಕ್ಟ್ ಮಾಡುತ್ತಿದ್ದಾರೆ. ಆರ್ಡಿನರಿ ಲುಂಗಿಯ ಕಾಸ್ಟ್ಯೂಮ್, ಬೆಂಕಿ ಕಾರುವ ಕಣ್ಣುಗಳ ಮೂಲಕವೇ ಚಿತ್ರವನ್ನು ಆವರಿಸಿಕೊಂಡಿದ್ದರು ಶಿವಣ್ಣ. ಶಿವರಾಜ್‍ಕುಮಾರ್‍ಗೆ ಸರಿಸಾಟಿಯಾಗಿ ಅಭಿನಯಿಸಿ ಗೆದ್ದಿದ್ದರು ಶ್ರೀಮುರಳಿ. ಹಲವು ವರ್ಷಗಳ ನಂತರ ದೇವರಾಜ್, ಮತ್ತೊಮ್ಮೆ ಖಳನಟನಾಗಿ ಅಬ್ಬರಿಸಿದ್ದರು.
ತಮಿಳಿನಲ್ಲಿ ಸಿದ್ಧವಾಗುತ್ತಿರುವ ಮಫ್ತಿ ರೀಮೇಕ್‍ಗೆ ವೇದಿಕೆ ಸಿದ್ಧವಾಗಿದೆ. ಭೈರತಿ ರಣಗಲ್ ಪಾತ್ರದಲ್ಲಿ ಸಿಂಬು ನಟಿಸುತ್ತಿದ್ದಾರೆ. ಶ್ರೀಮುರಳಿ ರೋಲ್‍ನಲ್ಲಿ ಗೌತಮ್ ಕಾರ್ತಿಕ್ ನಟಿಸುತ್ತಿದ್ದಾರೆ. ಮಫ್ತಿಗೆ ಅದ್ಭುತ ಕ್ಯಾಮೆರಾ ವರ್ಕ್ ಮಾಡಿದ್ದ ನವೀನ್ ಕುಮಾರ್ ಅವರೇ, ತಮಿಳಿನಲ್ಲೂ ಕ್ಯಾಮೆರಾಮನ್. ತೆಲುಗು ರೈಟ್ಸ್ ಕೂಡಾ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದು, ಶೀಘ್ರದಲ್ಲೆ ತೆಲುಗಿನಲ್ಲೂ ಸಿನಿಮಾ ಟೇಕಾಫ್ ಆಗಲಿದೆ.