ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿರುವ ಶ್ರೀಲಂಕಾದ ಬಾಂಬ್ ಸ್ಫೋಟ, ಭಯೋತ್ಪಾದಕ ದಾಳಿಯಲ್ಲಿ290ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕನ್ನಡಿಗರು, ಅದರಲ್ಲೂ ಐವರು ಜೆಡಿಎಸ್ ನಾಯಕರು ಮೃತಪಟ್ಟಿರುವುದು ಬೆಚ್ಚಿಬೀಳಿಸಿದೆ. ಈ ದುರಂತದ ವೇಳೆಯಲ್ಲಿಯೇ ಕನ್ನಡ ಚಿತ್ರರಂಗದ ಸ್ಟಾರ್ ನಿರ್ಮಾಪಕ ಸಿ.ಆರ್. ಮನೋಹರ್ ಬಚಾವ್ ಆಗಿದ್ದಾರೆ.
ಘಟನೆ ವೇಳೆ ಜೆಡಿಎಸ್ ಮುಖಂಡರೂ ಆಗಿರುವ ಶಾಸಕ(ವಿಧಾನಪರಿಷತ್ ಸದಸ್ಯ) ಸಿ.ಆರ್. ಮನೋಹರ್, ಭಯೋತ್ಪಾದಕರ ಅಟ್ಟಹಾಸಕ್ಕೆ ತುತ್ತಾದ ಶಾಂಗ್ರಿಲಾ ಹೋಟೆಲ್ ಪಕ್ಕದ ಇನ್ನೊಂದು ಹೋಟೆಲ್‍ನಲ್ಲಿ ತಂಗಿದ್ದರು. ಘಟನೆಯ ನಂತರ ಮನೋಹರ್, ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಅಷ್ಟೇ ಅಲ್ಲ, ಇದೇ ಘಟನೆಯಲ್ಲಿ ತಮಿಳು ಚಿತ್ರನಟಿ ರಾಧಿಕಾ ಶರತ್ ಕುಮಾರ್ ಕೂಡಾ ಬಚಾವ್ ಆಗಿದ್ದಾರೆ. ಘಟನೆ ಸಂಭವಿಸಿದಾಗ ರಾಧಿಕಾ ಶರತ್ ಕುಮಾರ್ ಕೊಲಂಬೋದ ಸಿನ್ನಿಮೋನ್ ಹೋಟೆಲ್‍ನಲ್ಲಿದ್ದರು.