ಮಂಡ್ಯ ಎಲೆಕ್ಷನ್‍ನಲ್ಲಿ ಅಕ್ಷರಶಃ ಪೆರೇಡ್ ಮಾಡಿದ್ದ ದರ್ಶನ್ ಮುಖ ಬಿಸಿಲಿಗೆ ಕಪ್ಪಾಗಿ ಹೋಗಿದೆ. ತಾವೊಬ್ಬ ಕಲಾವಿದ ಎನ್ನುವುದನ್ನೂ ಲೆಕ್ಕಿಸದೆ ಸುಡು ಬಿಸಿಲಿನಲ್ಲಿ ಸುಮಲತಾ ಪರ ಪ್ರಚಾರ ಮಾಡಿದ್ದ ದರ್ಶನ್, ದೇಹದ ಆರೈಕೆ ಮರೆತಿದ್ದರು. ಅಷ್ಟೇ ಅಲ್ಲ, ಅಪಘಾತದಲ್ಲಿ ದರ್ಶನ್ ಅವರ ಕೈಗೆ ಅಳವಡಿಸಿದ್ದ ರಾಡ್ ಕೂಡಾ ಬೆಂಡ್ ಆಗಿ ನೋವು ವಿಪರೀತವಾಗಿತ್ತು. ಅದರ ಚಿಕಿತ್ಸೆಯನ್ನೂ ಕಡೆಗಣಿಸಿದ್ದ ದರ್ಶನ್‍ಗೆ ಈಗ ವೈದ್ಯರು ಎರಡು ವಾರಗಳ ಕಡ್ಡಾಯ ವಿಶ್ರಾಂತಿ ಹೇಳಿದ್ದಾರೆ.
ಈ ಎರಡು ವಾರದಲ್ಲಿ ದರ್ಶನ್‍ರ ಕೈ ಮೂಳೆಯ ರಾಡ್ ಸರಿಯಾಗಿ ಕೂರಬೇಕು ಹಾಗೂ ಮುಖದ ಕಲರ್ ಮತ್ತೆ ಬರಬೇಕು. ಹೀಗಾಗಿ ದರ್ಶನ್‍ರ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾದ ಶೂಟಿಂಗ್ ಮುಂದಕ್ಕೆ ಹೋಗಿದೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್, ರಾಮ, ಆಂಜನೇಯ ಪೋಸ್ಟರ್‍ಗಳಿಂದಾಗಿ ಗಮನ ಸೆಳೆದಿತ್ತು.