ಗರ ಚಿತ್ರದ ಟ್ಯಾಗ್‍ಲೈನ್ ಅದೇ.. ಅಪ್ಪಟ ಪ್ರಾಮಾಣಿಕ ಮೋಸಗಾರರ ಆಟ. ಪ್ರಾಮಾಣಿಕತೆಗೂ, ಮೋಸಕ್ಕೂ ಎತ್ತಣಿಂದೆತ್ತಣ ಸಂಬಂಧ ಎನ್ನುವವರ ಕುತೂಹಲಕ್ಕೆ ಉತ್ತರ ಸಿಕ್ಕೋದು ಸಿನಿಮಾದಲ್ಲಿ ಮಾತ್ರ. ಅಷ್ಟರಮಟ್ಟಿಗೆ ಕುತೂಹಲ ಹುಟ್ಟಿಸುತ್ತಾರೆ ನಿರ್ದೇಶಕ ಮುರಳೀಕೃಷ್ಣ.
ಟಿವಿ ನಿರೂಪಕ ರೆಹಮಾನ್ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಗುಮ್ ಗುಮ್ ಗರ ಎಂಬ ವಿಶೇಷ ಥೀಮ್ ಸಾಂಗ್‍ನ್ನೂ ಬಿಟ್ಟಿದ್ದಾರೆ. ಮೇ ಮೊದಲ ವಾರ ತೆರೆಗೆ ಬರುತ್ತಿರುವ ಚಿತ್ರ ವಿಭಿನ್ನ ವಿಶೇಷ ಕಾರಣಗಳಿಂದಾಗಿಯೇ ಸದ್ದು ಮಾಡುತ್ತಿದೆ.