ಕನ್ನಡದಲ್ಲಿ ಚುಟು ಚುಟು ಹುಡುಗಿ ಅಂತಾನೇ ಫೇಮಸ್ ಆದವರು ಅಶಿಕಾ ರಂಗನಾಥ್. ಅಪ್ಪಟ ಚಿನಕುರುಳಿಯಂತೆ ಹೆಜ್ಜೆ ಹಾಕಿ, ಕನ್ನಡಿಗರ ಹೃದಯ ಗೆದ್ದ ಈ ಹುಡುಗಿ, ಸದ್ಯಕ್ಕೆ ಅವತಾರ್ ಪುರುಷ ಹಾಗೂ ರಂಗಮಂದಿರ ಚಿತ್ರಗಳಲ್ಲಿ ಬ್ಯುಸಿ.
ಚಿತ್ರರಂಗಕ್ಕೆ ಬಂದು 3 ವರ್ಷವಾಗಿದೆ. ಈ 3 ವರ್ಷಗಳಲ್ಲಿ ನನಗೆ ಒಳ್ಳೊಳ್ಳೆಯ ಚಿತ್ರತಂಡ, ಸಿನಿಮಾ ಸಿಕ್ಕಿದೆ. ಸಕ್ಸಸ್ ಕೂಡಾ ಸಿಕ್ಕಿದೆ ಎನ್ನುವ ಅಶಿಕಾಗೆ, ತೆಲುಗು, ತಮಿಳಿನಿಂದಲೂ ಆಫರ್‍ಗಳಿವೆಯಂತೆ. ತೆಲುಗಿನಲ್ಲಿ ಒಂದು ಸಿನಿಮಾದ ಮಾತುಕತೆ ಫೈನಲ್ ಹಂತದಲ್ಲಿದೆ. ಫೈನಲ್ ಆದ ಮೇಲೆ ಹೇಳ್ತೇನೆ ಎನ್ನುವ ಅಶಿಕಾಗೆ, ಕನ್ನಡದಲ್ಲಿ ಎಲ್ಲ ಸ್ಟಾರ್‍ಗಳ ಜೊತೆಯಲ್ಲೂ ನಟಿಸುವ ಆಸೆ ಇದೆ.
ಎಲ್ಲ ಸ್ಟಾರ್‍ಗಳಿಗಿಂತಲೂ ಪುನೀತ್ ಮೇಲೆ ಸ್ವಲ್ಪ ಹೆಚ್ಚು ಆಸೆ. ಅಪ್ಪು ಜೊತೆ ಒಂದು ಚಿತ್ರದಲ್ಲಾದರೂ ನಟಿಸಬೇಕು ಅನ್ನೋದು. ಕಾರಣ ಸಿಂಪಲ್, ಅಶಿಕಾ ಬೇಸಿಕಲಿ ಡ್ಯಾನ್ಸರ್. ನೃತ್ಯದಲ್ಲಿ ಪಳಗಿದವರಿಗೆ ಅಪ್ಪು ಜೊತೆ ನಟಿಸಬೇಕು ಅನ್ನಿಸೋದು ಕಾಮನ್ ಬಿಡಿ.