ಕುತ್ತೇ ಕನ್ವರ್ ನಹೀ.. ಕನ್ವರ್‍ಲಾಲ್ ಬೋಲೋ.. ಎಂದು ಅಬ್ಬರಿಸಿಯೇ ಕನ್ನಡಿಗರ ಹೃದಯದಲ್ಲಿ ಮಹಾರಾಜನಾದ ಅಂಬರೀಷ್ ಅವರಿಗೆ ಮೇ 29 ಹುಟ್ಟುಹಬ್ಬ. ಅವರ ನಿಧನದ ನಂತರ ಬಂದಿರುವ ಮೊದಲನೇ ಹುಟ್ಟುಹಬ್ಬ ಇದು. ಈ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬರುತ್ತಿದೆ ಅಂತ.
ಅಂತ ಚಿತ್ರವನ್ನು ಹೊಸ ಟೆಕ್ನಾಲಜಿಯೊಂದಿಗೆ ತೆರೆಗೆ ತರುತ್ತಿದ್ದಾರೆ ವೇಣುಗೋಪಾಲ್. ವೇಣುಗೋಪಾಲ್, ಅಂತ ಚಿತ್ರದ ನಿರ್ಮಾಪಕ. ಹೆಚ್.ಕೆ. ಅನಂತರಾವ್ ಅವರ ಕಾದಂಬರಿ ಆಧರಿಸಿದ ಚಿತ್ರಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನವಿತ್ತು.
ಅಂಬರೀಷ್, ಲಕ್ಷ್ಮೀ, ಜಯಮಾಲಾ, ವಜ್ರಮುನಿ, ಪಂಡರೀಭಾಯಿ, ತೂಗುದೀಪ ಶ್ರೀನಿವಾಸ್, ಪ್ರಭಾಕರ್, ಸುಂದರ ಕೃಷ್ಣ ಅರಸ್, ಮುಸರಿ ಕೃಷ್ಣ ಮೂರ್ತಿ, ಶಕ್ತಿಪ್ರಸಾದ್.. ಹೀಗೆ ಬಹುದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿತ್ತು.