ಟಿವಿ ನಿರೂಪಕ ರೆಹಮಾನ್, ಆವಂತಿಕ, ಆರ್ಯನ್, ನೇಹಾ ಪಾಟೀಲ್, ರಾಮಕೃಷ್ಣ, ರೂಪಾದೇವಿ, ಮನ್‍ದೀಪ್ ರಾಯ್, ತಬಲ ನಾಣಿ ಮೊದಲಾದವರು ನಟಿಸಿರುವ ಚಿತ್ರ ಗರ. 25 ಫ್ರೇಂ ಫಿಲಂಸ್ ಬ್ಯಾನರ್‍ನಲ್ಲಿ ಬರುತ್ತಿರುವ ಗರ ಚಿತ್ರ, ಇದೇ ವಾರ ರಿಲೀಸ್ ಆಗುತ್ತಿದೆ. ಹೊಸಬರ ಚಿತ್ರವಾದರೂ 100ಕ್ಕೂ ಹೆಚ್ಚು ಟಾಕೀಸುಗಳಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ.
ಕಥೆ,ಚಿತ್ರಕಥೆ, ಸಂಭಾಷಣೆ ಬರೆದು, ನಿರ್ದೇಶನವನ್ನೂ ಮಾಡಿರುವ ಕೆ.ಆರ್.ಮುರಳೀಕೃಷ್ಣಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಹೆಚ್ಚೂ ಕಡಿಮೆ 3 ದಶಕಗಳ ಅನುಭವ ಅವರ ಬೆನ್ನಿಗಿದೆ.
ಗರ ಚಿತ್ರದ ಹೈಲೈಟ್ ಎಂದರೆ, ಜಾನಿ ಲಿವರ್ ಮತ್ತು ಸಾಧುಕೋಕಿಲ ಒಟ್ಟಿಗೇ ನಟಿಸಿರುವುದು. ಸಾಧು ಅವರನ್ನು ಕನ್ನಡದ ಜಾನಿ ಲಿವರ್ ಎಂದೇ ಕರೆಯುವುದು ಗೊತ್ತಿರುವ ಸಂಗತಿಯೇ. ಅವರಿಬ್ಬರೂ ಈಗ ಒಟ್ಟಿಗೇ ನಟಿಸಿರುವುವುದು ಗರ ಚಿತ್ರದ ಹೈಲೈಟ್.