` ಸ್ಯಾಂಡಲ್‍ವುಡ್ ಪುಣ್ಯಕೋಟಿ ರಕ್ಷಿತ್ ಶೆಟ್ಟಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rakshit shetty to direct again
Rakshit Shetty

ಒಂದೆಡೆ ಅವನೇ ಶ್ರೀಮನ್ನಾರಾಯಣ.. ಮತ್ತೊಂದೆಡೆ 777 ಚಾರ್ಲಿ.. ಚಿತ್ರಗಳಲ್ಲಿ ಬ್ಯುಸಿಯಾಗಿರೋ ರಕ್ಷಿತ್ ಶೆಟ್ಟಿ, ಇನ್ನೊಂದೆಡೆ ಚಿತ್ರಗಳ ನಿರ್ಮಾಣದಲ್ಲೂ ಬ್ಯುಸಿ. ಪಡ್ಡೆಹುಲಿಯಲ್ಲಿ ಅತಿಥಿ ನಟರಾಗಿಯೂ ನಟಿಸಿರುವ ರಕ್ಷಿತ್ ಶೆಟ್ಟಿ, ಈಗ ಪುಣ್ಯಕೋಟಿಯಾಗೋಕೆ ಸಿದ್ಧರಾಗುತ್ತಿದ್ದಾರೆ.

ರಕ್ಷಿತ್ ಶೆಟ್ಟಿ ಹೊಸದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡು ಹಸು ಮತ್ತು ಹುಲಿಗಳನ್ನು ವ್ಯಕ್ತಿಗಳಿಗೆ ಹೋಲಿಸಿ ಕಥೆ ಸಿದ್ಧಪಡಿಸುತ್ತಿದ್ದಾರೆ. ಸ್ಕ್ರಿಪ್ಟ್ ವರ್ಕ್‍ನಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವ ರಕ್ಷಿತ್ ಶೆಟ್ಟಿ, ಸ್ವತಃ ನಿರ್ದೇಶನ ಮಾಡಲಿದ್ದಾರೆ.

ಉಳಿದವರು ಕಂಡಂತೆ ಚಿತ್ರದ ಬಳಿಕ ನಿರ್ದೇಶನದಿಂದ ದೂರವುಳಿದು, ನಟನೆಯಲ್ಲಷ್ಟೇ ತೊಡಗಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ, ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ಆದರೆ, ಪುಣ್ಯಕೋಟಿ ಪ್ರಾಜೆಕ್ಟ್‍ಗೆ ಜೀವ ಬರೋದು 2020ರಲ್ಲಿ ಎನ್ನುತ್ತಿವೆ ಮೂಲಗಳು.

Kurukshetra Celebrity Show Gallery

Rightbanner02_gimmick_inside

Nanna Prakara Movie Images