96, ಕಳೆದ ವರ್ಷ ತೆರೆ ಕಂಡಿದ್ದ ತಮಿಳು ಸಿನಿಮಾ. ವಿಜಯ್ ಸೇತುಪತಿ, ತ್ರಿಷಾ ಅಭಿನಯದ ಚಿತ್ರ, ನಿರ್ದೇಶಕ ಪ್ರೀತಂ ಗುಬ್ಬಿಯವರನ್ನು ಬಹುವಾಗಿ ಕಾಡಿತ್ತಂತೆ. ಸಿನಿಮಾ ನೋಡಿದ ಮೇಲೆ, ಇದನ್ನು ಕನ್ನಡದಲ್ಲಿ ಮಾಡಿದರೆ ಯಾರು ನಟಿಸಬಹುದು ಎಂದುಕೊಂಡಾಗ, ಮನಸ್ಸಿಗೆ ಬಂದವರೇ ಗಣೇಶ್. ತಕ್ಷಣ ಗಣೇಶ್ ಅವರಿಗೆ ಫೋನ್ ಮಾಡಿದ ಪ್ರೀತಂ, ಈ ಸಿನಿಮಾವನ್ನು ಯಾರಾದರೂ ಕನ್ನಡದಲ್ಲಿ ಮಾಡುತ್ತೇನೆ ಎಂದು ಬಂದರೆ, ಸುಮ್ಮನೆ ಒಪ್ಪಿಕೊಂಡು ಬಿಡಿ, ನಿಮಗೆ ಈ ಕ್ಯಾರೆಕ್ಟರ್ ಅದ್ಭುತವಾಗಿ ಸೂಟ್ ಆಗುತ್ತೆ ಎಂದಿದ್ದರಂತೆ.
ಇಲ್ಲಿ ಒಂದು ವಿಷಯ ಹೇಳಬೇಕು, ಇದೆಲ್ಲ ಆಗುವಾಗ 96 ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡುವ ಐಡಿಯಾ ರಾಮು ಅವರಿಗಾಗಲೀ, ನಿರ್ದೇಶಿಸುತ್ತೇನೆ ಎಂಬ ಕಲ್ಪನೆ ಪ್ರೀತಂ ಗುಬ್ಬಿಯವರಿಗಾಗಲೀ ಇರಲಿಲ್ಲ.
ಅನಂತರದ ದಿನಗಳಲ್ಲಿ ಎಲ್ಲವೂ ನಡೆದು ಹೋಗಿ, ಗಣೇಶ್ ಹೀರೋ ಆಗಿ, ಭಾವನಾ ನಾಯಕಿಯಾಗಿ, ಪ್ರೀತಂ ಗುಬ್ಬಿಯವರೇ ನಿರ್ದೇಶಕರಾಗಿ 99 ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಈಗ ಸಿನಿಮಾ ತೆರೆಗೆ ಸಿದ್ಧವಾಗಿದೆ. ದಟ್ ಈಸ್ ಮ್ಯಾಜಿಕ್.