` ಡಿಟೆಕ್ಟಿವ್ ದಿವಾಕರ ಅಲ್ಲ.. ಇವನು ಡಿಟೆಕ್ಟಿವ್ ಓಂಕಾರ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
meet detective omkar in trayambakam
Rj Rohith Image from Trayambakam

ಬೆಲ್‍ಬಾಟಂ ಸಿನಿಮಾದಲ್ಲಿ ಡಿಟೆಕ್ಟಿವ್ ದಿವಾಕರನಾಗಿ ರಿಷಬ್ ಶೆಟ್ಟಿ ಮಿಂಚು ಹರಿಸಿದ್ದರು. ಸಿನಿಮಾ ಹಿಟ್ ಆಗಿ, ದಿವಾಕರನೂ ಪ್ಯಾಪುಲರ್ ಆಗಿದ್ದ. ಈಗ ಇನ್ನೊಬ್ಬ ಡಿಟೆಕ್ಟಿವ್ ಬರುತ್ತಿದ್ದಾನೆ. ಇವನು ಡಿಟೆಕ್ಟಿವ್ ಓಂಕಾರ.

ಓಂಕಾರನಾಗಿ ಬರ್ತಿರೋದು ಆರ್‍ಜೆ ರೋಹಿತ್. ಪಾತ್ರದ ಹೆಸರು ಓಂ ಅಲಿಯಾಸ್ ಓಂಕಾರ್. ಪ್ರಾಚ್ಯವಸ್ತು ಇಲಾಖೆಯ ಉದ್ಯೋಗಿಯೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಾನೆ. ಆತನದ್ದು ಕೊಲೆ ಎಂದು ಅನುಮಾನಗೊಂಡು ಬೆನ್ನು ಹತ್ತುವ ಓಂಕಾರ್ ಎದುರು, ನಿಗೂಢಗಳ ಪ್ರಪಂಚವೇ ತೆರೆದುಕೊಳ್ಳುತ್ತಾ ಹೋಗುತ್ತೆ. ಅವುಗಳೆಲ್ಲವನ್ನೂ ಆತ 3ನೇ ಕಣ್ಣಿನಿಂದ ನೋಡಬೇಕು. ಆ ಮೂರನೇ ಕಣ್ಣು ತ್ರಯಂಬಕಂ.

ದಯಾಳ್ ನಿರ್ದೇಶನದ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್, ಅನುಪಮಾ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

India Vs England Pressmeet Gallery

Odeya Audio Launch Gallery