` ರವಿಚಂದ್ರನ್ ಮಗಳ ಮದುವೆಗೆ ಹಂಸಲೇಖ ಸಂಗೀತ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
hamsalekha's music for ravichandran
Hamsalekha, Ravichandran

ರವಿಚಂದ್ರನ್ ಮತ್ತು ಹಂಸಲೇಖ ಚಿತ್ರರಂಗದಲ್ಲಿ ಅದೆಷ್ಟು ಒಳ್ಳೆಯ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತು. ಮಧ್ಯೆ ಭಿನ್ನಾಭಿಪ್ರಾಯಗಳು ಬಂದಿರಬಹುದು. ರವಿ ಚಿತ್ರಗಳಿಗೆ ಹಂಸಲೇಖ ಸಂಗೀತ ನೀಡಿರುವುದು ನಿಂತಿರಬಹುದು. ಆದರೆ, ಅವರಿಬ್ಬರ ಗೆಳೆತನ ಈಗಲೂ ಹಾಗೆಯೇ ಇದೆ. 

ರವಿಚಂದ್ರನ್‍ರನ್ನು ಯಜಮಾನ್ರೇ ಎಂದು ಕರೆಯುವ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಹಂಸಲೇಖ. ಅದು ರವಿಚಂದ್ರನ್ ಮಗಳ ಮದುವೆಯಲ್ಲೂ ಸಾಬೀತಾಗುತ್ತಿದೆ.

ಮೇ 28,29ರಂದು ರವಿಚಂದ್ರನ್ ಮಗಳು ಗೀತಾಂಜಲಿ ಮದುವೆ ಇದೆ. ಆ ಮದುವೆಗೆ ಸಂಗೀತ ಕಾರ್ಯಕ್ರಮ ನಡೆಸಿಕೊಡ್ತಿರೋದು ಹಂಸಲೇಖ. ರವಿಚಂದ್ರನ್ ತಮ್ಮ ಮಗಳಿಗಾಗಿಯೇ ಒಂದು ಹಾಡನ್ನು ಬರೆದು, ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಅವರ ಮಗಳ ಮದುವೆಯ ಇಡೀ ಸಂಗೀತ ಕಾರ್ಯಕ್ರಮನ್ನು ಅವರ ಗೆಳೆಯ ಹಂಸಲೇಖ ನಿರ್ದೇಶನ ಮಾಡುತ್ತಿದ್ದಾರೆ.