ಗೋಲ್ಡನ್ ಸ್ಟಾರ್ ಗಣೇಶ್, ಭಾವನಾ ಅಭಿನಯದ ಹೊಸ ಸಿನಿಮಾ 99. ರಾಮು ಬ್ಯಾನರ್‍ನಲ್ಲಿ ಬರುತ್ತಿರೋ ಈ ಚಿತ್ರ, ಅರ್ಜುನ್ ಜನ್ಯ ಸಂಗೀತ ನಿರ್ದೇಶನದ 100ನೇ ಚಿತ್ರವೂ ಹೌದು. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ.
ಚಿತ್ರದ ಟ್ರೇಲರ್ ನೋಡಿರುವ ಕಿಚ್ಚ ಸುದೀಪ್, ತಮ್ಮದೇ ನಿರ್ದೇಶನದ ಆಟೋಗ್ರಾಫ್ ಸಿನಿಮಾ ನೆನಪಿಸಿಕೊಂಡಿದ್ದಾರೆ. ಗಣೇಶ್ ವಾಕಿಂಗ್ ಸ್ಟೈಲ್ ಕಿಚ್ಚನಿಗೆ ಇಷ್ಟವಾಗಿದೆ. ನನ್ನ ಫ್ರೆಂಡ್ ಭಾವನಾ ತುಂಬಾ ನ್ಯಾಚುರಲ್ ಆಗಿ ಕಾಣಿಸ್ತಾರೆ ಎಂದು ಹೊಗಳಿರುವ ಸುದೀಪ್, ನಿರ್ದೇಶಕ ಪ್ರೀತಂ ಗುಬ್ಬಿ ಬೆನ್ನುತಟ್ಟಿದ್ದಾರೆ. ಏಪ್ರಿಲ್ 26ಕ್ಕೆ ಬರುತ್ತಿರುವ ಸಿನಿಮಾ ಈ ವರ್ಷದ ಗಣೇಶ್‍ರ ಮೊದಲ ಸಿನಿಮಾ.