` ವ್ಹಾವ್.. ಗರ ಪೋಸ್ಟರ್‍ಗಳನ್ನು ನೋಡಿದಿರಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
gara poster creates curisosity
Gara

ಟಿವಿ 9ನಲ್ಲಿ ನ್ಯೂಸ್ ಆ್ಯಂಕರ್ ಆಗಿದ್ದ ರೆಹಮಾನ್, ನಂತರ ಬಿಗ್‍ಬಾಸ್‍ಗೆ ಹೋಗಿ, ಕಿರುತೆರೆಯಲ್ಲಿ ಮನರಂಜನಾ ಕಾರ್ಯಕ್ರಮಗಳ ನಿರೂಪಕರಾಗಿಯೂ ಯಶಸ್ಸು ಕಂಡವರು. ಅವರು ಇದೇ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ಚಿತ್ರ ಗರ. ಮುರಳೀಕೃಷ್ಣ ನಿರ್ದೇಶನದ ಗರ ರಿಲೀಸ್‍ಗೆ ರೆಡಿಯಾಗಿದೆ. ಈ ಹೊತ್ತಿನಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿರುವುದು ಗರ ಚಿತ್ರದ ಪೋಸ್ಟರ್‍ಗಳು. ಡಿಸೈನರ್ ತೇಜಸ್ ಎಂಬ ಹುಡುಗ.

ಇದರ ಕ್ರೆಡಿಟ್ ತೇಜಸ್ ಅವರಿಗೆ ಹೋಗಬೇಕು. ನನಗೆ ಹೊಸ ತರಹದ ಪೋಸ್ಟರ್ ಮಾಡಿಸಬೇಕು ಎಂಬ ಆಸೆಯಿತ್ತು. ಪೋಸ್ಟರ್‍ಗಳ ಮೂಲಕವೇ ಜನರಲ್ಲಿ ಕುತೂಹಲ ಹುಟ್ಟಿಸಬೇಕೆಂಬ ಕನಸಿತ್ತು. ಅದರ ಬಗ್ಗೆ ಕಲ್ಪನೆಗಳೂ ಇದ್ದವು. ಅವುಗಳನ್ನೆಲ್ಲ ಈ ತೇಜಸ್‍ಗೆ ಹೇಳಿದೆ. ಆತ ಅದಕ್ಕೆ ತಕ್ಕಂತೆ ಹತ್ತು ಹಲವು ಡಿಸೈನ್‍ಗಳೊಂದಿಗೆ ಬಂದ. ಈಗ ಗೆದ್ದಿದ್ದೇವೆ ಅಂತಾರೆ ಮುರಳೀಕೃಷ್ಣ.

ಈಗ ಪೋಸ್ಟರ್‍ಗಳಿಗೆ ಸಿಗುತ್ತಿರೋ ರೆಸ್ಪಾನ್ಸ್ ನೋಡಿ ಖುಷಿಯಾಗುತ್ತಿದೆ ಎಂದಿದ್ದಾರೆ ಡಿಸೈನರ್ ತೇಜಸ್.