ತ್ರಯಂಬಕಂ ಎಂದರೆ ಶಿವನ ಮೂರನೇ ಕಣ್ಣು ಎಂದರ್ಥ. ಅಮರಕೋಶ ಓದಿದವರಿಗೆ ಇದು ಖಂಡಿತಾ ಗೊತ್ತಿರುತ್ತೆ. ಚಿತ್ರದ ಹೆಸರು ಹೀಗಿದ್ದರೆ, ಚಿತ್ರದಲ್ಲಿರೋದು ನವಪಾಶಾಣದ ಕಥೆ. ಭಾರತದಲ್ಲಿ ಒಂದಾನೊಂದು ಕಾಲದಲ್ಲಿ ಅಸ್ಥಿತ್ವದಲ್ಲಿ ವೈದ್ಯಕೀಯ ಪದ್ಧತಿ ಮತ್ತು ಔಷಧದ ಕಥೆ. ಸುಮಾರು 5000 ವರ್ಷಗಳ ಹಿಂದಿನ ಕಥೆ. ಇದುವರೆಗೂ ಅದನ್ನು ಯಾರೂ ಟಚ್ ಮಾಡುವ ಸಾಹಸಕ್ಕೂ ಹೋಗಿರಲಿಲ್ಲ.
ಆಗಿನ ಆ ಕಥೆಗೂ, ಈಗಿನ ಈ ನವಮಾನಸಕ್ಕೂ ಎತ್ತಣಿಂದೆತ್ತಣ ಸಂಬಂಧ..? ಚಿತ್ರದ ಹೆಸರಷ್ಟೇ ಅಲ್ಲ, ಇಡೀ ಚಿತ್ರ ನಿಮ್ಮನ್ನು ಸೀಟಿನ ತುದಿಯಲ್ಲಿಯೇ ಕೂರಿಸುತ್ತೆ. ಕೌತುಕ ಅಂಶಗಳಿವೆ. ಒಂದು ಪರಿಪೂರ್ಣ ಸಸ್ಪೆನ್ಸ್ ಥ್ರಿಲ್ಲರ್ ಅನ್ನೋ ಭರವಸೆ ಕೊಡ್ತಾರೆ ಅನುಪಮಾ ಗೌಡ.
ಕರಾಳ ರಾತ್ರಿಯಲ್ಲಿ ಗಟ್ಟಿಗಿತ್ತಿಯಾಗಿ ನಟಿಸಿ ಮೆಚ್ಚುಗೆ ಗಿಟ್ಟಿಸಿದ್ದ ಅನುಪಮಾಗೆ ಇಲ್ಲಿ ಜರ್ನಲಿಸ್ಟ್ ಪಾತ್ರ. ಇವರ ತಂದೆಯಾಗಿ ನಟಿಸಿರೋದು ರಾಘವೇಂದ್ರ ರಾಜ್‍ಕುಮಾರ್. ರಾಘಣ್ಣನ 2ನೇ ಇನ್ನಿಂಗ್ಸ್‍ನಲ್ಲಿ ಬರುತ್ತಿರುವ 2ನೇ ಸಿನಿಮಾ ಇದು.
ದಯಾಳ್ ಪದ್ಮನಾಭನ್ ಈ ನವಪಾಶಾಣದ ಕಥೆಯನ್ನು ಶ್ರೀಕೃಷ್ಣ ದೇವರಾಯನನ್ನು ಈಗಿನ ಕಾಲಕ್ಕೆ ತಂದಿದ್ದು ಹೇಗೆ ಅನ್ನೋದೇ ಒಂದು ದೊಡ್ಡ ರಹಸ್ಯ. ಆ ರಹಸ್ಯ ಥಿಯೇಟರುಗಳಲ್ಲಿ ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ.