ಕಡಿಮೆ ಬಜೆಟ್, ಅದ್ಭುತ ಕಥೆ, ಕಡಿಮೆ ಸಮಯ, ಒಳ್ಳೆಯ ಸಿನಿಮಾ..ಇದು ದಯಾಳ್ ಪದ್ಮನಾಭನ್ ಸ್ಪೆಷಾಲಿಟಿ. ಆ್ಯಕ್ಟರ್ ಚಿತ್ರದ ನಂತರ ತಮ್ಮ ವರಸೆಯನ್ನೇ ಬದಲಿಸಿಕೊಂಡು ಒಳ್ಳೆಯ ಚಿತ್ರಗಳನ್ನು ನೀಡಿ ಗೆದ್ದ ದಯಾಳ್, ತ್ರಯಂಬಕಂನಲ್ಲೂ ಆ ಸಾಧನೆ ರಿಪೀಟ್ ಮಾಡಿದ್ದಾರೆ. ಇದೇ ವಾರ ರಿಲೀಸ್ ಆಗುತ್ತಿರುವ ತ್ರಯಂಬಕಂ ಚಿತ್ರದ ನಿರ್ಮಾಪಕರು, ಈಗಾಗಲೇ ಬಜೆಟ್ಟಿನ ಶೇ.50ರಷ್ಟನ್ನು ಪಡೆದುಕೊಂಡಿದ್ದಾರೆ. ಅಷ್ಟರಮಟ್ಟಿಗೆ ನಿರ್ಮಾಪಕರು ಸೇಫ್.
ರಾಘವೇಂದ್ರ ರಾಜ್‍ಕುಮಾರ್, ಅನುಪಮಾ ಗೌಡ, ಆರ್‍ಜೆ ರೋಹಿತ್ ಪ್ರಮುಖ ಪಾತ್ರದಲ್ಲಿರೋ ಚಿತ್ರಕ್ಕೆ ನವೀನ್ ಕೃಷ್ಣ ಸಂಭಾಷಣೆ ಇದೆ. ವಿಶ್ವ ಮಾರುಕಟ್ಟೆಯ ಹಕ್ಕನ್ನು ಜಾಕ್ ಮಂಜು ಪಡೆದುಕೊಂಡಿದ್ದಾರೆ. ಇಂದು ಸಂಜೆ ಜಿಟಿ ಮಾಲ್‍ನಲ್ಲಿ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ.