ಬಟರ್ ಫ್ಲೈ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಸೆನ್ಸಾರ್ ಮುಗಿಸಿರುವ ಬಟರ್‍ಫ್ಲೈ ಪಾರುಲ್ ಯಾದವ್ ಅಭಿನಯದ ಸಿನಿಮಾ. ನಿರ್ಮಾಪಕಿಯರಲ್ಲಿ ಅವರೂ ಒಬ್ಬರು. ಕ್ವೀನ್ ಚಿತ್ರದ ರೀಮೇಕ್ ಆಗಿರುವ ಬಟರ್‍ಫ್ಲೈ ಸಿನಿಮಾದ ಪ್ರಚಾರಕ್ಕೆ ಡಿಫರೆಂಟ್ ತಂತ್ರ ಮಾಡುತ್ತಿದ್ದಾರೆ ಪಾರುಲ್.
ಬಟರ್ ಫ್ಲೈ ಚಿತ್ರದ ಪ್ರಚಾರಕ್ಕಾಗಿ ಚಿಟ್ಟೆಯ ವೇಷ ತೊಟ್ಟಿದ್ದಾರೆ ಪಾರುಲ್. ಚಿತ್ರದ ಟೈಟಲ್‍ಗೆ ತಕ್ಕಂತೆ, ವಿಶೇಷ ವಿನ್ಯಾಸದ ಡ್ರೆಸ್ ತೊಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ ಬಟರ್‍ಫ್ಲೈ, ಏಕಕಾಲದಲ್ಲಿ ತೆಲುಗು, ತಮಿಳು, ಮಲಯಾಳಂನಲ್ಲೂ ಸಿದ್ಧವಾಗಿದ್ದು, ಒಂದೇ ವಾರ ಎಲ್ಲ ಕಡೆ ರಿಲೀಸ್ ಆಗುತ್ತಿದೆ.