ಇತ್ತೀಚೆಗೆ ದೇಶದ ಎಲ್ಲ ಪತ್ರಿಕೆಗಳ ಕ್ರೀಡಾಪುಟಗಳಲ್ಲಿ ಪ್ರಕಟವಾಗಿದ್ದ ಸುದ್ದಿ ಅದು. ಥೈಲ್ಯಾಂಡ್‍ನಲ್ಲಿ ನಡೆದ ಮ್ಯಾಕ್ಸ್ ಮಯಾಥಾಯ್ ಸ್ಪರ್ಧೆಯಲ್ಲಿ ಕರ್ನಾಟಕದ ಸೂರ್ಯ ಪ್ರಶಸ್ತಿ
ಗೆದ್ದಿದ್ದರು. ಥಾಯ್ ಫೈಟರ್ ಅರ್ಪಿಂಗ್ ಚಿತಾಂಗ್ ವಿರುದ್ಧ ಗೆಲುವು ಸಾಧಿಸಿದ್ದರು. ಮಾಯಥಾಯ್ ಎನ್ನುವುದು ಮಾರ್ಶಲ್ ಆಟ್ರ್ಸ್‍ನ ಮುಂದುವರಿದ ಭಾಗ. ವಿಶೇಷವಾದ ಸಮರಕಲೆ.
ಅಂದಹಾಗೆ ಚಿತ್ರಲೋಕದಲ್ಲಿ ಈ ಹುಡುಗನ ಬಗ್ಗೆ ಹೇಳುತ್ತಿರುವುದಕ್ಕೆ ವಿಶೇಷ ಕಾರಣವೂ ಇದೆ. ಈ ಹುಡುಗ ಸೂರ್ಯ, ಕನ್ನಡದ ಕಲಾ ನಿರ್ದೇಶಕ, ನಟ ಅರುಣ್ ಸಾಗರ್ ಪುತ್ರ. ಮಗನ ಮಾಯಥಾಯ್ ಕನಸಿಗೆ ನೀರೆರೆದಿರುವ ಅರುಣ್ ಸಾಗರ್, ಹಲವು ವರ್ಷಗಳಿಂದ ಮೈಸೂರಿನ ವಿಕ್ರಮ್ ನಾಗರಾಜ್ ಬಳಿ ತರಬೇತಿ ಕೊಡಿಸುತ್ತಿದ್ದರು.
ನನ್ನ ಮಗ ಭಾರತವೇ ಹೆಮ್ಮೆ ಪಡುವಂತಹ ಸಾಧನೆಗೆ ಮುನ್ನುಡಿ ಬರೆದಿದ್ದಾರೆ. ಒಬ್ಬ ತಂದೆಯಾಗಿ ಇದಕ್ಕಿಂತ ದೊಡ್ಡ ಹೆಮ್ಮೆ ಇನ್ನೇನಿದೆ. ಅವನು ಮತ್ತಷ್ಟು ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ ಅರುಣ್ ಸಾಗರ್.
ಗೆಳೆಯನ ಮಗನ ಸಾಧನೆಗೆ ಕಿಚ್ಚ ಸುದೀಪ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ. ಕಂಗ್ರಾಟ್ಸ್ ಸೂರ್ಯ.