ಬೆಳೆದ ಮೇಲೆ ನೀನು.. ನಾನು ಮಗುವಾದೆ.. ಯಾಕೋ ಏನೋ ತಿಳಿದೇನೇ ಚಡಪಡಿಸಿದೆ ಮನಸು.. ನೋವು ನಲಿವು ಜೊತೆಗೆ ಸಂಭ್ರಮ ಅಡಗಿದೆ.. ಓಓಓಓ... ನನ್ನಾ ಮಗಳೇ..
ಇದು ರವಿಚಂದ್ರನ್, ತಮ್ಮ ಪ್ರೀತಿಯ ಮಗಳು ಗೀತಾಂಜಲಿ ಮದುವೆಗೆ ಕೊಡುತ್ತಿರುವ ಹಾಡಿನ ಉಡುಗೊರೆ. ಈ ಹಾಡಿನ ಸಾಹಿತ್ಯ, ಸಂಗೀತ ಎಲ್ಲವೂ ಅವರದ್ದೇ. ಹಾಡು ಹಾಡಿರುವುದು ಗೌತಮ್ ಶ್ರೀವಾಸ್ತವ್.
ಮೇ 29ನೇ ತಾರೀಕು ರವಿಚಂದ್ರನ್‍ನ ಪ್ರೀತಿಯ ಪುತ್ರಿ ಗೀತಾಂಜಲಿ ಅವರ ಮದುವೆ, ಉದ್ಯಮಿ ಅಜಯ್ ಅವರೊಂದಿಗೆ ನಡೆಯಲಿದೆ. ಅಂದಹಾಗೆ ಮೇ 29 ಅಂಬರೀಷ್ ಅವರ ಹುಟ್ಟಹಬ್ಬ. ಅದಾದ ಮಾರನೇ ದಿನ ಮೇ 30, ರವಿಚಂದ್ರನ್ ಹುಟ್ಟುಹಬ್ಬ.
ಒಟ್ಟಿನಲ್ಲಿ ಪ್ರತಿಯೊಬ್ಬ ಮಗಳೂ ತನಗೂ ತನ್ನ ಅಪ್ಪ ಇಂಥದ್ದೊಂದು ಉಡುಗೊರೆ ಕೊಡಲಿ ಎಂದು ಬಯಸುವಂತಹ, ಮಗಳನ್ನು ಪ್ರೀತಿಸುವ ಪ್ರತಿಯೊಬ್ಬ ಅಪ್ಪನೂ, ಮಗಳಿಗೆ ಸ್ಪೆಷಲ್ ಗಿಫ್ಟ್ ಕೊಡಬೇಕು ಎಂದು ನಿರ್ಧರಿಸುವಂತಹ ಅಪರೂಪದ ಕಾಣಿಕೆಯನ್ನಂತೂ ರವಿಚಂದ್ರನ್ ಕೊಟ್ಟಿದ್ದಾರೆ.