` ಕವಲುದಾರಿ ಸಕ್ಸಸ್ ಪಾರ್ಟಿ - ಮಸಾಲದೋಸೆ, ಮೈಸೂರು ಪಾಕ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kavaludaari different success story
Kavaludaari

ಸಕ್ಸಸ್ ಪಾರ್ಟಿಯನ್ನು ಹೀಗೂ ಮಾಡಬಹುದು. ಒಂದು ಮೈಸೂರು ಪಾಕ್, ಜೊತೆಗೊಂದು ಮಸಾಲ ದೋಸೆ.. ಅನಂತ್‍ನಾಗ್, ಗಾಯತ್ರಿ, ರಿಷಿ ಹಾಗೂ ನಿರ್ದೇಶಕ ಹೇಮಂತ್ ರಾವ್ ಒಟ್ಟಿಗೇ ಇಂಥಾದ್ದೊಂದು ಪಾರ್ಟಿ ಮಾಡಿದ್ದಾರೆ. ನಮ್ಮ ಈ ಚಿತ್ರದ ಗೆಲುವು, ನಿರ್ದೇಶಕ ಹೇಮಂತ್ ರಾವ್ ಅವರಂತಹ ಮಹತ್ವಾಕಾಂಕ್ಷಿ ನಿರ್ದೇಶಕರ ಗೆಲುವು ಎಂದಿದ್ದಾರೆ ನಾಯಕ ನಟ ರಿಷಿ. ಪಾರ್ಟಿಯಲ್ಲಿ ಮಿಸ್ ಆಗಿರುವುದು ನಿರ್ಮಾಪಕ ಪುನೀತ್ ರಾಜ್‍ಕುಮಾರ್.

ಅವರು ಇನ್ನೊಂದು ಕಡೆ ಚಿತ್ರವನ್ನು ವಿದೇಶಗಳಲ್ಲಿ ರಿಲೀಸ್ ಮಾಡಲು ಓಡಾಡುತ್ತಿದ್ದಾರೆ. ಕನ್ನಡಕ್ಕೆ ವಿಭಿನ್ನವಾದ, ರೆಗ್ಯುಲರ್ ಫಾಮ್ರ್ಯಾಟ್‍ನಿಂದ ದೂರವಾಗಿರುವ ಕಥೆಯೊಂದನ್ನು ಸಿನಿಮಾ ಮಾಡಿ, ಗೆದ್ದಿರುವ ಪುನೀತ್, ಇಂತಹ ಪ್ರಯತ್ನಗಳನ್ನು ಬೆಂಬಲಿಸಿ, ನೋಡಿ, ಹರಸಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.

I Love You Movie Gallery

Rightbanner02_butterfly_inside

Paddehuli Movie Gallery