` ಏನ್ ಖದರ್ ಗುರು.. ಭಲೇ ರುಸ್ತುಂ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rustum trailer creates magic
Rustum

ಹುರಿಗಟ್ಟಿದ ಮೀಸೆ, ಕಟ್ಟುಮಸ್ತಾದ ದೇಹ, ಕಣ್ಣಿನಲ್ಲೇ ಬೆಂಕಿ, ಆಗಾಗ್ಗೆ ಕೈಲಿ ಪ್ರತ್ಯಕ್ಷವಾಗುವ ಲಾಂಗು, ರಿವಾಲ್ವರು, ಬೆಂಕಿ ಡೈಲಾಗು, ಒಂದಿಷ್ಟು ಪ್ರೀತಿ, ಕಣ್ಣೀರು, ವಿಲನ್ನುಗಳ ಅಬ್ಬರ.. ಇದಿಷ್ಟೂ ಸೇರಿದರೆ ರುಸ್ತುಂ.

ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಚಿತ್ರ ರುಸ್ತುಂ, ಪ್ರೇಕ್ಷಕರನ್ನು ಶಿಳ್ಳೆ ಹೊಡೆಯುವಂತೆ ಮಾಡಿದೆ. ಅದರಲ್ಲೂ `ತುಂಬಾ ದಿನದ ಹಿಂದೇನೇ ರೌಡಿಸಂನ ಕಾಂಟ್ರ್ಯಾಕ್ಟ್ ತೆಗೆದುಕೊಂಡಿದ್ದೀನಿ' `ಅರೆಸ್ಟ್ ಅಂದ್ರೆ ಅಲರ್ಜಿ, ಎನ್‍ಕೌಂಟರ್ ಅಂದ್ರೆ ಎನರ್ಜಿ' ಎಂಬ ಡೈಲಾಗುಗಳು ಶಿಳ್ಳೆ ಹೊಡೆಸುತ್ತವೆ.

ಶಿವಣ್ಣನಿಗೆ ಶ್ರದ್ಧಾ ಶ್ರೀನಾಥ್ ಜೋಡಿಯಾಗಿದ್ದರೆ, ಮಯೂರಿ ತಂಗಿ. ವಿವೇಕ್ ಒಬೆರಾಯ್‍ಗೆ ರಚಿತಾ ರಾಮ್ ಜೊತೆಗಾತಿ. ಅಣ್ಣನ ಖಡಕ್ ಲುಕ್ಕಿಗೆ ಫಿದಾ ಅಗಿರುವುದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.