` ಪಂಚತಂತ್ರ ನೋಡ ಬನ್ನಿ - ಪ್ರೇಕ್ಷಕರಿಗೆ ಯೋಗರಾಜ್ ಭಟ್ಟರ ಪತ್ರ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yogaraj bhat writes a letter to panchatantra lovers
Yograj Bhat

ಕನ್ನಡ ಪಿಕ್ಚರ್‍ನಲ್ಲಿ ಏನಿರುತ್ತೆ.. ಅನ್ನೋದು ಕಿರಿಯರ ಮಾತು..ಎಷ್ಟೋ ವರ್ಷ ಆಯ್ತ್ ಕಣ್ರಿ.. ಸಿನಿಮಾನೇ ನೋಡಿಲ್ಲ ಅನ್ನೋದು ಹಿರಿಯರ ವಾದ.

ಈ ಇಬ್ಬರಿಗೂ ಯೋಗರಾಜ್ ಭಟ್ಟರು ಒಂದು ಪತ್ರ ಬರೆದಿದ್ದಾರೆ. ಬನ್ನಿ.. ಪಂಚತಂತ್ರ ನೋಡಿ.. ಇದು ಹೊಸಬರೇ ನಟಿಸಿರುವ ಸಿನಿಮಾ. ಹಿರಿಯರು ಕಿರಿಯರು ನಡುವಿನ ಜನರೇಷನ್ ಗಲಾಟೆ, ಕರೆಂಟು ಹರಿದಂತ ಕ್ಲೈಮಾಕ್ಸ್.. ಹೀಗೆ  ಇದು ನಿಮ್ಮ ಮನಗಳ, ಮನೆಯ ಕಥೆ. ಬಂದು ನೋಡಿ. ಎಂಜಾಯ್ ಮಾಡಿ. ಅಪರೂಪದ ಸಿನ್ಮಾ ಮಿಸ್ ಮಾಡಬೇಡಿ. ಹೊಸಬರನ್ನು ಪ್ರೋತ್ಸಾಹಿಸಿ..

ಎಂದು ಪುಟ್ಟದೊಂದು ಬರಹ ರೂಪದ ಪತ್ರ ಬರದಿದ್ದಾರೆ ಭಟ್ಟರು. ವಿಹಾನ್, ಸೋನಲ್, ಅಕ್ಷರಾ ಗೌಡ, ರಂಗಾಯಣ ರಘು ಮೊದಲಾದವರು ನಟಿಸಿದ್ದ ಚಿತ್ರ, ಬಿಡಗಡೆಗೂ ಮೊದಲು ಹಾಡಿನಿಂದ, ಬಿಡುಗಡೆಯಾದ ನಂತರ ಚಿತ್ರದಲ್ಲಿರೋ ಗಟ್ಟಿ ಕಥೆಯಿಂದ ಸದ್ದು ಮಾಡುತ್ತಿದೆ. 25ನೇ ದಿನದತ್ತ ಮುನ್ನಡೆಯುತ್ತಿರುವ ಚಿತ್ರ, ಎರಡೂ ಜನರೇಷನ್‍ರವರನ್ನು ಆಕರ್ಷಿಸುತ್ತಿದೆ.

Dr Rajkumar Gallery

Rightbanner02_butterfly_inside

Paddehuli Movie Gallery