5 ಸಾವಿರ ವರ್ಷಗಳ ಹಿಂದೆ ನವಪಾಶಾಣ ಎಂಬ ಸಿದ್ಧೌಷಧ ಬಳಕೆಯಲ್ಲಿತ್ತು. ಭಾರತದಲ್ಲೇ. ಅದನ್ನು ಸರ್ವರೋಗಕ್ಕೂ ಬಳಸಲಾಗುತ್ತಿತ್ತು. ವಿಶೇಷವೇನು ಗೊತ್ತೇ.. ಅದನ್ನು ಆಧುನಿಕ ವೈದ್ಯಲೋಕ ಈಗಲೂ ಫಾಲೋ ಮಾಡುತ್ತಿದೆ. ಹೇಗೆ.. ಒಂದು ಚರಿತ್ರೆಯನ್ನು, ವೈದ್ಯಲೋಕದ ಕಥೆಯನ್ನು ಥ್ರಿಲ್ಲರ್ ರೂಪದಲ್ಲಿ ಹೇಳಿದ್ದಾರೆ ನಿರ್ದೇಶಕ ದಯಾಳ್. ಇದೇ ತ್ರಯಂಬಕಂ ಸೀಕ್ರೆಟ್.
ಈ ಚಿತ್ರದಲ್ಲಿ ಸಸ್ಪೆನ್ಸ್, ಫ್ಯಾಂಟಸಿ, ಭ್ರಮೆ, ಥ್ರಿಲ್ಲರ್ ಎಲ್ಲವೂ ಇದೆ. ಉಳಿದದ್ದನ್ನು ಚಿತ್ರದಲ್ಲೇ ನೋಡಿ ಎನ್ನುವ ದಯಾಳ್‍ಗೆ ಈ ಚಿತ್ರದಲ್ಲಿ ಜೊತೆಯಾಗಿರುವುದು ರಾಘವೇಂದ್ರ ರಾಜ್‍ಕುಮಾರ್. ಅನುಪಮಾ ಗೌಡ. ಇವರಿಬ್ಬರದ್ದೂ ಇಲ್ಲಿ ತಂದೆ ಮಗಳ ಪಾತ್ರ. ಆರ್‍ಜೆ ರೋಹಿತ್ ಇಲ್ಲಿ ಡಿಟೆಕ್ಟಿವ್ ಪಾತ್ರದಲ್ಲಿ ನಟಿಸಿದ್ದಾರೆ.
ಕಡಿಮೆ ಬಜೆಟ್‍ನಲ್ಲಿ ವಿಭಿನ್ನ ಕಥೆಗಳನ್ನು ಹೇಳಿ ಬ್ಯಾಕ್ ಟು ಬ್ಯಾಕ್ ಗೆಲ್ಲುತ್ತಲೇ ಇರುವ ದಯಾಳ್, ಇಲ್ಲಿ ಮತ್ತೊಮ್ಮೆ ಗೆಲ್ಲುವ ಹಂಬಲದಲ್ಲಿದ್ದಾರೆ. ಚಿತ್ರ ಇದೇ 19ನೇ ತಾರೀಕು ತೆರೆಗೆ ಬರುತ್ತಿದೆ.