` ಅನಂತ್‍ನಾಗ್ ಮೂಲತಃ ಕಾಶ್ಮೀರಿ. ಇದು ಸತ್ಯ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ananth nag's link with kashmir
Ananth Nag

ಅನಂತ್‍ನಾಗ್.. ಈ ಹೆಸರು ಕೇಳಿದರೆ ಕನ್ನಡ ಕಲಾ ರಸಿಕರು ರೋಮಾಂಚಿತರಾಗುತ್ತಾರೆ. ಅನಂತ್‍ನಾಗ್.. ಈ ಹೆಸರು ಕೇಳಿದರೆ ಸೈನಿಕರು ತಕ್ಷಣ ಅಲರ್ಟ್ ಆಗುತ್ತಾರೆ. ರೋಮಾಂಚಿತಗೊಳಿಸುವ ಅನಂತ್‍ನಾಗ್, ಕನ್ನಡದ ಕಲಾವಿದರಾದರೆ, ಅಲರ್ಟ್ ಮಾಡಿಸುವ ಅನಂತ್‍ನಾಗ್, ಕಾಶ್ಮೀರದಲ್ಲಿರೋ ಉಗ್ರರ ಉಪಟಳದಲ್ಲಿ ಸದಾ ಬೆಂಕಿಯಾಗುತ್ತಿರುವ ಜಿಲ್ಲೆ. ಆ ಅನಂತ್‍ನಾಗ್‍ಗೂ, ಈ ಅನಂತ್‍ನಾಗೂ ಸಂಬಂಧವಿಲ್ಲ, ಇರೋಕೆ ಸಾಧ್ಯವೂ ಇಲ್ಲ.. ಇವರೋ ಉತ್ತರ ಕನ್ನಡ ಜಿಲ್ಲೆಯ ನಾಗರಕಟ್ಟೆಯವರು. ಅಲ್ಲಿಗೂ.. ಇಲ್ಲಿಗೂ ಎತ್ತಣಿಂದೆತ್ತಣ ಸಂಬಂಧ ಬಿಡ್ರಿ ಎಂದುಕೊಂಡಿದ್ದವರಿಗೆ ಇದು ಅಚ್ಚರಿ ಎನಿಸುವ ಸತ್ಯ. ಅನಂತ್‍ನಾಗ್ ಮೂಲತಃ ಕಾಶ್ಮೀರಿ.

ಕಾಶ್ಮೀರದಲ್ಲಿ ಪಂಡಿತರು ಮೂಲನಿವಾಸಿಗಳು. ಅವರ ಮೇಲೆ ಅಲ್ಲಿ ಶತಮಾನಗಳಿಂದ ಹಲ್ಲೆ, ಅತ್ಯಾಚಾರಗಳು ನಡೆಯುತ್ತಾ ಬಂದಿವೆ. ಈಗ ಕಾಶ್ಮೀರದಲ್ಲಿ ಪಂಡಿತರೇ ಅಲ್ಪಸಂಖ್ಯಾತರು. ಅನಂತ್‍ನಾಗ್ ಅವರ ಕುಟುಂಬ ಹಲವು ವರ್ಷಗಳ ಹಿಂದೆ ಅಲ್ಲಿಯೇ ನೆಲೆಸಿತ್ತು.

ಅನಂತ್‍ನಾಗ್ ಸಾರಸ್ವತಿ ಋಗ್ವೇದಿ ಬ್ರಾಹ್ಮಣರು. ಸುಮಾರು ವರ್ಷಗಳ ಹಿಂದೆ ಅಲ್ಲಿಂದ ಇಲ್ಲಿಗೆ ವಲಸೆ ಬಂದವರಂತೆ. ಅನಂತ್‍ನಾಗ್ ಅವರ ಪುರಾತನ ಹಿರಿಯರು ಲೋಮಶರ್ಮರು.  ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವುದರಿಂದ ತಪ್ಪಿಸಿಕೊಳ್ಳಲು ಬಂದ 200 ಕುಟುಂಬಗಳು ಮೊದಲು ನೆಲೆಸಿದ್ದು ಗೋವಾದಲ್ಲಿ. ಆದರೆ, ಅಲ್ಲಿ ಕ್ರಿಶ್ಚಿಯನ್ ಮಿಷನರಿಗಳಿಂದ ಮತಾಂತರದ ಒತ್ತಡ ಆರಂಭವಾದಾಗ ಬಂದು ಆಶ್ರಯ ಬೇಡಿದ್ದು ಶೃಂಗೇರಿಯಲ್ಲಿ. ಶೃಂಗೇರಿ ಪೀಠದವರು ಇವರನ್ನೆಲ್ಲ ಆಗಿನ ಕೆಳದಿ ಸಂಸ್ಥಾನದ ಅರಸರ ಬಳಿ ಕಳಿಸಿಕೊಟ್ಟರಂತೆ. ಸ್ವಾಮಿಗಳ ಆಜ್ಞೆಯನ್ನು ಮೀರುವುದುಂಟೆ. ಅವರಿಗೆಲ್ಲ ಕೆಳದಿ ಅರಸರು ಒಂದಿಷ್ಟು ಜಮೀನುಗಳನ್ನು ಉಂಬಳಿಯಾಗಿ ಕೊಟ್ಟರಂತೆ. ಹಾಗೆ ಉಂಬಳಿಯಾಗಿ ಪಡೆದ ಜಮೀನಿನಲ್ಲಿ ಅನಂತ್‍ನಾಗ್ ಅವರ ಕುಟುಂಬ ನಾಗರಕಟ್ಟೆ ಎಂಬ ಊರಿನಲ್ಲಿ ನೆಲೆಸಿತು. ಇದು ನಿರ್ದೇಶಕ ಶ್ಯಾಂ ಬೆನಗಲ್ ಅವರಿಗೂ ಗೊತ್ತಿತ್ತು.

ಹೀಗಾಗಿಯೇ ಶ್ಯಾಂ ಬೆನಗಲ್, ಅನಂತ್ ಅವರ ಹೆಸರನ್ನು ಎರಡೂ ರೀತಿಯ ನೆಲೆಯ ಸಂಕೇತ ತಿಳಿಸುವಂತೆ ಅನಂತ್‍ನಾಗ್ ಎಂದು ಕರೆದರು. ಹೀಗಾಗಿ.. ಅನಂತ್‍ನಾಗ್ ಹೆಸರಿನಲ್ಲಿ ಕನ್ನಡದ ನಾಗರಕಟ್ಟೆಯೂ ಇದೆ. ಕಾಶ್ಮೀರದ ಅನಂತ್‍ನಾಗ್ ಕೂಡಾ ಇದೆ. 

ಅಂದಹಾಗೆ ಅನಂತ್‍ನಾಗ್ ಕವಲುದಾರಿಯಲ್ಲಿ ಮುತ್ತಣ್ಣ ಎಂಬ ಹೆಸರಿನ ರಿಟೈರ್ಡ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಅದು ಕಾಶ್ಮೀರದಲ್ಲಿ ಹುತಾತ್ಮನಾದ ಯೋಧನೊಬ್ಬನ ಹೆಸರು. ಕವಲುದಾರಿ ಸಿನಿಮಾ ಥಿಯೇಟರುಗಳಲ್ಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery