` ಮದಗಜನಿಗೆ ನಟಸಾರ್ವಭೌಮನ ಚೆಲುವೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
anupama pairs opposite sri murali
Anupama, SriMurali

ನಟಸಾರ್ವಭೌಮ ಚಿತ್ರದಲ್ಲಿ ಇಷ್ಟಗಲ ಕನ್ನಡಕ ಹಾಕಿಕೊಂಡು ಕಣ್ಣಲ್ಲೇ ನಗುವನ್ನು ತುಳುಕಿಸಿ ಮೋಡಿ ಮಾಡಿದ್ದ ಚೆಲುವೆ ಅನುಪಮಾ ಪರಮೇಶ್ವರನ್. ಪುನೀತ್ ಜೊತೆ ತಾಜಾ ಸಮಾಚಾರ ಹೇಳಿದ್ದ ಹುಡುಗಿ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ಮದಗಜ ಚಿತ್ರದ ಮೂಲಕ.

ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ಹೀರೋಯಿನ್ ಆಗಿ ಅನುಪಮಾ ಪರಮೇಶ್ವರನ್ ಫೈನಲ್ ಆಗಿದ್ದಾರೆ. ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಚಿತ್ರ ಮದಗಜ. ಮುಂದಿನ ತಿಂಗಳು ಸೆಟ್ಟೇರುತ್ತಿರುವ ಚಿತ್ರಕ್ಕೆ ಅನುಪಮಾ ಡೇಟ್ಸ್ ನೋಡಿಕೊಂಡು ಪ್ಲಾನ್ ಮಾಡಿಕೊಳ್ಳುತ್ತಿದೆ ಚಿತ್ರತಂಡ.

Matthe Udbhava Trailer Launch Gallery

Maya Bazaar Pressmeet Gallery