ನೀನಾಸಂ ಸತೀಶ್, ಉದಯ್ ಮೆಹ್ತಾ ಜೋಡಿ, ಲವ್ ಇನ್ ಮಂಡ್ಯ ಚಿತ್ರದ ನಂತರ ಮತ್ತೆ ಒಂದಾಗಿರುವ ಸಿನಿಮಾ ಬ್ರಹ್ಮಚಾರಿ 100% ವರ್ಜಿನ್. ಈ ಬ್ರಹ್ಮಚಾರಿಯ ಚಿತ್ತ ಚಂಚಲಗೊಳಿಸಲು ಬಂದಿರುವ ಚೆಲುವೆ ಆದಿತಿ ಪ್ರಭುದೇವ.
ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಆದಿತಿ, ಸ್ಯಾಂಡಲ್ವುಡ್ನ ಬ್ಯುಸಿ ನಟಿಯಾಗುತ್ತಿದ್ದಾರೆ. ಬಜಾರ್ ನಂತರ ಚಿರಂಜೀವಿ ಸರ್ಜಾ ಎದುರು ಸಿಂಗದಲ್ಲಿ ನಟಿಸುತ್ತಿರುವ ಆದಿತಿ, ಈಗ ನೀನಾಸಂ ಸತೀಶ್ಗೆ ಜೋಡಿಯಾಗಿದ್ದಾರೆ.
ಆದಿತಿ ಕೈಲಿ ಈಗಾಗಲೇ ತೋತಾಪುರಿ, ರಂಗನಾಯಕಿ, ಸಿಂಗ ಹಾಗೂ ದುನಿಯಾ ವಿಜಯ್ ಜೊತೆ ಒಂದು ಸಿನಿಮಾ ಇದೆ.