` ಹೀರೋ ಬನ್‍ಗಯಾ ಡೈರೆಕ್ಟರ್ - ನೈಟ್‍ಔಟ್ ಅಡಿಗ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
hero turns director thorugh night out
Rakesh Adiga's Nightout

ಕನ್ನಡದಲ್ಲಿ ಹೀರೋಗಳು ನಿರ್ದೇಶಕರಾಗಿರುವುದು ಹೊಸದೇನಲ್ಲ. ಹೀರೋಗಳಾಗಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುದೀಪ್, ಡೈರೆಕ್ಟರ್ ಆಗಿಯೂ ಗೆದ್ದಿದ್ದಾರೆ. ವಿಜಯ್ ರಾಘವೇಂದ್ರ ಮೊನ್ನೆ ಮೊನ್ನೆ ನಿರ್ದೇಶನದಲ್ಲೊಂದು ಕೈ ನೋಡಿದ್ದಾರೆ. ಇಂತಹ ಹಲವು ಪ್ರಯತ್ನಗಳ ನಡುವೆಯೇ ಡೈರೆಕ್ಟರ್ ಆಗುವ ಸಾಹಸಕ್ಕೆ ಕೈ ಹಾಕಿರುವುದು ರಾಕೇಶ್ ಅಡಿಗ.

ರಾಕೇಶ್ ಅಡಿಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದೇ ಹೀರೋ ಆಗಿ. ಜೋಶ್ ಚಿತ್ರದಲ್ಲಿ ನಿತ್ಯಾ ಮೆನನ್ ಎದುರು ನಟಿಸಿ ಗೆದ್ದಿದ್ದ ರಾಕೇಶ್ ಅಡಿಗ, ಅದಾದ ಮೇಲೆ ಅಲೆಮಾರಿ, ಯಾರೇ ಕೂಗಾಡಲಿ ಚಿತ್ರಗಳಲ್ಲಿ ನೆಗೆಟಿವ್ ಶೇಡ್‍ಗಳಲ್ಲಿಯೂ ನಟಿಸಿ 

ಗೆದ್ದಿದ್ದವರು. ಈಗ ನೈಟ್ ಔಟ್ ಚಿತ್ರದ ಮೂಲಕ ಡೈರೆಕ್ಟರ್ ಆಗಿ ಒಂದು ಕೈ ನೋಡುತ್ತಿದ್ದಾರೆ.

ಒಂದು ರಾತ್ರಿ, ಒಂದು ಆಟೋ, ಕೆಲವೇ ಪಾತ್ರಧಾರಿಗಳನ್ನಿಟ್ಟುಕೊಂಡು ಥ್ರಿಲ್ಲರ್ ಕಥೆಯೊಂದನ್ನು ಹೇಳಿದ್ದಾರೆ ರಾಕೇಶ್ ಅಡಿಗ. ಎಸ್‍ಎಸ್‍ಎಲ್‍ಸಿಯಲ್ಲಿದ್ದಾಗಲೇ ಸಾಕ್ಷ್ಯಚಿತ್ರಗಳಿಗೆ, ಅಲ್ಬಂಗಳಿಗೆ ಕೆಲಸ ಮಾಡಿದ್ದ ರಾಕೇಶ್ ಅಡಿಗ, ಸ್ವತಃ ತಾವೇ ಒಂದು ಟೀಮ್ ಕಟ್ಟಿ ಹೊಸಬರ ತಂಡವನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಲಕ್ಷ್ಮೀ ನವೀನ್ ಮತ್ತು ನವೀನ್ ಕೃಷ್ಣ ನಿರ್ಮಾಪಕರು. 

Ayushmanbhava Movie Gallery

Ellidhe Illitanaka Movie Gallery