` ರಶ್ಮಿಕಾಗೆ ಲಡ್ಡು ಬಂದು ಡೈರೆಕ್ಟ್ ಆಗಿ ಬಾಯಿಗ್ ಬಿತ್ತು..! - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
rahsmika bags aa film offer in telugu
Rashmika Mandanna

ಅಲ್ಲು ಅರ್ಜುನ್, ಟಾಲಿವುಡ್‍ನ ಸ್ಟೈಲಿಷ್ ಸ್ಟಾರ್. ವರ್ಷಕ್ಕೊಂದೋ.. ಎರಡು ವರ್ಷಕ್ಕೊಂದೋ ಸಿನಿಮಾ ಮಾಡುವ ಅಲ್ಲು ಅರ್ಜುನ್ ಇದುವರೆಗೆ ನಟಿಸಿರುವುದು 19 ಸಿನಿಮಾ ಮಾತ್ರ. ಅಲ್ಲು ಅರ್ಜುನ್ ಚಿತ್ರಗಳಲ್ಲಿ ಚಾನ್ಸ್ ಸಿಗುವುದೆಂದರೆ ಅದೃಷ್ಟ ಎಂದು ಪರಿಭಾವಿಸುವ ನಾಯಕಿಯರಿಗೇನೂ ಕೊರತೆಯಿಲ್ಲ.

ಇನ್ನು ಸುಕುಮಾರ್. ಆರ್ಯ, ಆರ್ಯ 2, 100% ಲವ್, ನಾನ್ನಕು ಪ್ರೇಮತೋ, ರಂಗಸ್ಥಳಂ.. ಹೀಗೆ ಡಿಫರೆಂಟ್ ಡಿಫರೆಂಟ್ ಹಿಟ್ ಚಿತ್ರಗಳನ್ನೇ ಕೊಟ್ಟಿರುವ ನಿರ್ದೇಶಕ. 

ಅಲ್ಲು ಅರ್ಜುನ್ ಸ್ಟಾರ್ ನಟರಾಗಿದ್ದು ಇದೇ ಸುಕುಮಾರ್ ಅವರ ಆರ್ಯ ಚಿತ್ರದಿಂದ. ಈಗ ಈ ಜೋಡಿ ಮತ್ತೊಮ್ಮೆ ಜೊತೆಯಾಗಿದೆ. ಅದು ಅಲ್ಲು ಅರ್ಜುನ್‍ರ 20ನೇ ಸಿನಿಮಾ.

ಆ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರುವುದು ರಶ್ಮಿಕಾ ಮಂದಣ್ಣ. ಅಲ್ಲು ಅರ್ಜುನ್ ಅವರ ಬ್ಯಾನರ್‍ನ ಗೀತಗೋವಿಂದಂ ಸಿನಿಮಾ ಮೂಲಕ ಸ್ಟಾರ್ ನಟಿಯಾದ ರಶ್ಮಿಕಾ, ಈಗ ಅಲ್ಲು ಅರ್ಜುನ್ ಅವರಿಗೇ ಹೀರೋಯಿನ್ ಆಗುತ್ತಿದ್ದಾರೆ. ಸದ್ಯಕ್ಕೆ ಎಎ20 ಎಂಬ ಟೈಟಲ್‍ನಲ್ಲಿ ಸಿನಿಮಾ ಶುರುವಾಗುತ್ತಿದೆ. ರಶ್ಮಿಕಾಗೆ ಲಡ್ಡು ಬಂದು ಬಾಯಿಗೆ ಬಿದ್ದಿದೆ.

#

Ayushmanbhava Movie Gallery

Kaurya Song Release Gallery