ಶಿವರಾಜ್‍ಕುಮಾರ್ ಅಭಿನಯದ ಕವಚ ಚಿತ್ರ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿರುವಾಗಲೇ, ಅವರ ಮತ್ತೊಂದು ಸಿನಿಮಾ ರಿಲೀಸ್ ಆಗೋಕೆ ತುದಿಗಾಲಲ್ಲಿ ನಿಂತಿದೆ. ಶಿವರಾಜ್‍ಕುಮಾರ್ ಖಡಕ್ ಇನ್ಸ್‍ಪೆಕ್ಟರ್ ಆಗಿ ನಟಿಸಿರುವ, ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ ರುಸ್ತುಂ ಚಿತ್ರದ ಟ್ರೇಲರ್
ಏಪ್ರಿಲ್ 14ಕ್ಕೆ ಹೊರಬೀಳಲಿದೆ.
ಕವಚ ರಿಲೀಸ್ ಹಿಂದೆಯೇ ರುಸ್ತುಂ ಬೇಕಿತ್ತಾ..? ಟೈಂ ಗ್ಯಾಪ್ ಕಡಿಮೆ ಆಯ್ತಲ್ವಾ ಅಂದ್ರೆ, ನಿರ್ದೇಶಕ ರವಿವರ್ಮ ಹೇಳೋದೇ ಬೇರೆ. ಕವಚ ಚಿತ್ರವೇ ಬೇರೆ. ನಮ್ಮ ಸಿನಿಮಾವೇ ಬೇರೆ. ಇದು ಪಕ್ಕಾ ಮಾಸ್ ಸಿನಿಮಾ. ಕವಚ ಕೌಟುಂಬಿಕ ಸಿನಿಮಾ. ರುಸ್ತುಂ ಜಾನರೇ ಬೇರೆ ಅಂತಾರೆ ರವಿವರ್ಮ.
ಇಷ್ಟೆಲ್ಲ ಆಗಿ ಸಿನಿಮಾ ರಿಲೀಸ್ ಆಗುವುದು ಮೇ ತಿಂಗಳ ಕೊನೆಗೆ. ಹೀಗಾಗಿ ಹಲವು ವಾರಗಳ ಗ್ಯಾಪ್ ಸಿಗಲಿದೆ ಎನ್ನುವುದು ರವಿವರ್ಮ ಭರವಸೆ. ಶಿವಣ್ಣನಿಗೆ ಚಿತ್ರದಲ್ಲಿ ಜೋಡಿಯಾಗಿರೋದು ಶ್ರದ್ಧಾ ಶ್ರೀನಾಥ್. ವಿವೇಕ್ ಒಬೇರಾಯ್, ರಚಿತಾ ರಾಮ್, ಮಯೂರಿ ಪ್ರಮುಖ ಪಾತ್ರದಲ್ಲಿದ್ದಾರೆ.