` ಅಭಿಮಾನಿಗಳ ಜೊತೆ ಶಿವಣ್ಣ ಕವಚ ದರ್ಶನ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shivanna watches kavacha movie with fans
Shivarajkumar Amidst Fans watching Kavacha Movie

ಶಿವರಾಜ್‍ಕುಮಾರ್ ಅಭಿನಯದ ಕವಚ, ಪ್ರೇಕ್ಷಕರಿಗೆ ಇಷ್ಟವಾಗಿದೆ. ಶಿವಣ್ಣ ಬೇರೆಯದೇ ಮ್ಯಾನರಿಸಂ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಹೃದಯಕ್ಕೆ ಲಗ್ಗೆಯಿಟ್ಟು ಗೆದ್ದಿದ್ದಾರೆ. ಮಾಸ್ ಮತ್ತು ಕ್ಲಾಸ್ ಎರಡೂ ವರ್ಗಕ್ಕೆ ಇಷ್ಟವಾಗುವಂತಿರುವ ಚಿತ್ರಕ್ಕೆ ಅಭಿಮಾನಿಗಳಿಂದಲೂ ಬಹುಪರಾಕ್ ಸಿಕ್ಕಿರುವುದು ವಿಶೇಷ. ಇಂತಹುದೊಂದು ಚಾಲೆಂಜ್‍ನ್ನು ಸ್ವೀಕರಿಸುವ ಧೈರ್ಯ ಶಿವಣ್ಣಂಗೆ ಮಾತ್ರ ಇದೆ ಅನ್ನೋದು ಅಭಿಮಾನಿಗಳ ಹೆಮ್ಮೆ. ಈಗ ಆ ಅಭಿಮಾನಿಗಳಿಗಾಗಿ, ಅಭಿಮಾನಿಗಳ ಜೊತೆಯಲ್ಲೇ ಸಿನಿಮಾ ನೋಡೋಕೆ ರೆಡಿಯಾಗಿದ್ದಾರೆ ಶಿವರಾಜ್‍ಕುಮಾರ್.

ಶಿವರಾಜ್‍ಕುಮಾರ್, ಬೇಬಿ ಮೀನಾಕ್ಷಿ, ವಸಿಷ್ಟ ಸಿಂಹ, ಇಶಾ ಕೊಪ್ಪಿಕರ್, ಕೃತ್ತಿಕಾ ಜಯರಾಂ, ರಮೇಶ್ ಭಟ್ ಮೊದಲಾದವರು ನಟಿಸಿರುವ ಸಿನಿಮಾಗೆ, ಜಿವಿಆರ್ ವಾಸು ನಿರ್ದೇಶಕ. ಮಾಸ್ ಸ್ಟಾರ್‍ವೊಬ್ಬ ಅಂಧನಂತೆ ಪ್ರಯೋಗಾತ್ಮಕ ಚಿತ್ರದಲ್ಲಿ ನಟಿಸಿ ಗೆದ್ದಿರುವುದೇ ಶಿವಣ್ಣನ ಅಭಿಮಾನಿಗಳಿಗೆ ಥ್ರಿಲ್ ನೀಡಿದೆ. ಶಿವರಾಜ್‍ಕುಮಾರ್ ಜೊತೆ ಚಿತ್ರತಂಡದ ಕಲಾವಿದರು, ತಂತ್ರಜ್ಞರೂ ಕೂಡಾ ಇರಲಿದ್ದಾರೆ ಎನ್ನುವುದು ಇನ್ನೊಂದು ವಿಶೇಷ.

Kurukshetra Celebrity Show Gallery

Rightbanner02_gimmick_inside

Nanna Prakara Movie Images