ಕಿರಿಕ್ ಪಾರ್ಟಿಯ ಸಾನ್ವಿ ಅಲಿಯಾಸ್ ರಶ್ಮಿಕಾ, ಈಗ ಸೌಥ್ ಇಂಡಿಯಾ ಕ್ರಶ್. ಪಡ್ಡೆ ರಸಿಕರ ಡಾರ್ಲಿಂಗ್. ಕನಸಲ್ಲೂ ಅಲೆಲೆಲೆಲೆ ಎನ್ನಿಸುವ ಸುಂದರಿ, ಈಗಷ್ಟೇ 22 ಮುಗಿಸಿ, 23ಕ್ಕೆ ಕಾಲಿಟ್ಟಿದ್ದಾರೆ. ಹಾಗೆ ಹುಟ್ಟುಹಬ್ಬ ಸಂಭ್ರಮಿಸುವ ವೇಳೆಯಲ್ಲಿ ಅವರು ಇದ್ದುದು ಪೊಗರು ಚಿತ್ರದ ಸೆಟ್ಟಿನಲ್ಲಿ.
ಧ್ರುವ ಸರ್ಜಾ ಅವರಿಗೆ ಟೀಚರ್ ಆಗಿ ನಟಿಸುತ್ತಿರುವ ರಶ್ಮಿಕಾ ಅವರಿಗೆ, ನಿರ್ದೇಶಕ ನಂದಕಿಶೋರ್ ಸೇರಿದಂತೆ ಇಡೀ ಚಿತ್ರತಂಡ ಹುಟ್ಟುಹಬ್ಬ ಶುಭಾಶಯ ಕೋರಿ ಸಂಭ್ರಮಿಸಿದೆ. ಸೆಟ್ನಲ್ಲೇ ಕೇಕ್ ಕಟ್ ಮಾಡಿ ಖುಷಿ ಪಟ್ಟಿದ್ದಾರೆ ರಶ್ಮಿಕಾ ಮಂದಣ್ಣ.