ಪ್ಯಾರ್ ಗೇ ಹುಡುಗಿ ಪಾರೂಲ್ ಯಾದವ್ ನಟಿಸಿರುವ ಸಿನಿಮಾ ಬಟರ್ ಫ್ಲೈ. ಈ ಚಿತ್ರಕ್ಕೆ ಅವರು ನಾಯಕಿಯೂ ಹೌದು, ನಿರ್ಮಾಪಕಿಯೂ ಹೌದು. ರಮೇಶ್ ಅರವಿಂದ್ ನಿರ್ದೇಶನದ ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಇದು. ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ತಯಾರಾಗಿರುವ ಸಿನಿಮಾ, ಸೆನ್ಸಾರ್ ಗೆದ್ದಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.
ಚಿತ್ರಕ್ಕೆ ಯಾವುದೇ ಕಟ್ ಹೇಳದೆ ಸೆನ್ಸಾರ್ ಪಾಸ್ ಮಾಡಿದೆ. ಮೇ ತಿಂಗಳಲ್ಲಿ ಸಿನಿಮಾ ಏಕಕಾಲದಲ್ಲಿ ನಾಲ್ಕೂ ಭಾಷೆಗಳಲ್ಲಿ ತೆರೆ ಕಾಣಲಿದೆ. ತಮಿಳಿನಲ್ಲಿ ತಮನ್ನಾ, ತೆಲುಗಿನ ಕಾಜಲ್ ಅಗರ್‍ವಾಲ್ ಹಾಗೂ ಮಲಯಾಳಂನಲ್ಲಿ ಮಂಜಿಮ್ ಮೋಹನ್ ಬಟರ್ ಫ್ಲೈ ಆಗಿದ್ದಾರೆ