ಮಫ್ತಿ, ಶಿವಣ್ಣನನ್ನು ಬೇರೆಯದೇ ಇಮೇಜ್‍ನಲ್ಲಿ ತೋರಿಸಿದ ಸಿನಿಮಾ. ಇಡೀ ಸಿನಿಮಾದಲ್ಲಿ ಶಿವಣ್ಣ ಕಣ್ಣುಗಳ ಮೂಲಕವೇ ನಟಿಸಿ ಸೈ ಎನಿಸಿಕೊಂಡಿದ್ದರು. ಅದಕ್ಕೆ ತದ್ವಿರುದ್ಧವಾದ ಪಾತ್ರ ಕವಚ. ಇಲ್ಲಿ ಹೀರೋಗೆ ಕಣ್ಣಿದ್ದರೂ ಕಾಣಲ್ಲ. ಅದೇ ದೊಡ್ಡ ಚಾಲೆಂಜ್. ಆ ಚಾಲೆಂಜ್‍ನ್ನು ಗೆದ್ದಿದ್ದಾರೆ ಶಿವಣ್ಣ.
ಅದೊಂದು ವಿಶೇಷ ಚಾಲೆಂಜ್. ಕಪ್ಪು ಕನ್ನಡಕ ಹಾಕಿಕೊಂಡು ನಟಿಸಬಹುದಿತ್ತು. ಅದು ಸುಲಭದ ದಾರಿ. ಆದರೆ, ಹಾಗೆ ಮಾಡದೆ ನಟಿಸಿದ್ದೇನೆ. ಕೆಲವು ಅಂಧರನ್ನು ಗಮನಿಸಿ, ಬಾಡಿ ಲಾಂಗ್ವೇಜ್ ಬದಲಿಸಿಕೊಂಡಿದ್ದೇನೆ. ಇದುವರೆಗಿನ ಪಾತ್ರಗಳಲ್ಲಿ ಕವಚ ಚಿತ್ರದ ಪಾತ್ರ ನನ್ನನ್ನು ಕಾಡಿದೆ. ಅಷ್ಟೇ ಅಲ್ಲ, ರಿಯಲ್ ಲೈಫಿನಲ್ಲಿ ಕೂಡಾ ಆ ಪಾತ್ರದೊಳಗೆ ಜೀವಿಸುವಂತೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ ಶಿವರಾಜ್‍ಕುಮಾರ್.
ಜಿವಿಆರ್ ವಾಸು ನಿರ್ದೇಶನದ ಕವಚ ನಾಳೆ ರಿಲೀಸ್ ಆಗುತ್ತಿದೆ. ಇದು 14 ವರ್ಷಗಳ ನಂತರ ಶಿವರಾಜ್‍ಕುಮಾರ್ ನಟಿಸಿರುವ ರೀಮೇಕ್ ಸಿನಿಮಾ. ಮಲಯಾಳಂನ ಒಪ್ಪಂ ಚಿತ್ರದ ರೀಮೇಕ್. ಮಲಯಾಳಂನಲ್ಲಿ ಮೋಹನ್‍ಲಾಲ್ ಮಾಡಿದ್ದ ಪಾತ್ರದಲ್ಲಿ ಶಿವರಾಜ್‍ಕುಮಾರ್ ನಟಿಸಿದ್ದಾರೆ.