ಅರೆ.. ನೀನಾಸಂ ಸತೀಶ್ ಅವರಿಗೆ ಮದುವೆಯಾಗಿ ಮುದ್ದಾದ ಮಗು ಇರುವ ಸುದ್ದಿ ಓದಿದ್ದೆನಲ್ಲ.. ಅವರು ಮತ್ತೆ ಬ್ರಹ್ಮಚಾರಿಯಾಗೋಕೆ ಹೇಗೆ ಸಾಧ್ಯ ಎಂದು ತಲೆಗೆ ಹುಳ ಬಿಟ್ಕೋಬೇಡಿ. ಇದು ಸಿನಿಮಾ ಫೀಲ್ಡು. ಏನ್ ಬೇಕಾದ್ರೂ ಆಗಬಹುದು. ಹೀಗಾಗಿ ನೀನಾಸಂ ಸತೀಶ್ ಬ್ರಹ್ಮಚಾರಿ ಆಗಿದ್ದಾರೆ.
ಲವ್ ಇನ್ ಮಂಡ್ಯ ಕಾಂಬಿನೇಷನ್ ಸತೀಶ್ ಮತ್ತು ಉದಯ್ ಮೆಹ್ತಾ ಒಟ್ಟಿಗೇ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿಯ ಅಪ್ಡೇಟ್ ಸುದ್ದಿ ಇದು. ಆ ಚಿತ್ರದ ಹೆಸರು ನೀನಾಸಂ ಸತೀಶ್ ಬ್ರಹ್ಮಚಾರಿ 100% ವರ್ಜಿನ್. ಡೈರೆಕ್ಟರ್ ಡಬಲ್ ಎಂಜಿನ್, ಬಾಂಬೆ ಮಿಠಾಯಿ ಸಿನಿಮಾ ನಿರ್ದೇಶಿಸಿದ್ದ ಚಂದ್ರಮೋಹನ್. ಯುಗಾದಿ ಹಬ್ಬಕ್ಕೆ ಸಿನಿಮಾ ಶುರು.