ಅತ್ತ ಮಂಡ್ಯದಲ್ಲಿ ಬ್ಯುಸಿಯಾಗಿದ್ದರೂ, ಇತ್ತ ಸಿನಿಮಾ ಕೆಲಸಗಳು ನಿರಂತರವಾಗಿ ಚಾಲ್ತಿಯಲ್ಲಿವೆ. ಅಭಿಷೇಕ್ ಅಂಬರೀಷ್ ಅಭಿನಯದ ಮೊದಲ ಸಿನಿಮಾ ಅಮರ್ ಚಿತ್ರದ ಒಂದು ಹಾಡನ್ನು ಯುಗಾದಿಗೆ ರಿಲೀಸ್ ಮಾಡುತ್ತಿದೆ ಚಿತ್ರತಂಡ. ಈಗಾಗಲೇ ಟೀಸರ್ ಮೂಲಕ ಹವಾ ಸೃಷ್ಟಿಸಿರುವ ಅಮರ್ ಸಿನಿಮಾ ಟೀಂ, ಯುಗಾದಿಗೆ ಹೊಸ ಹಾಡನ್ನು ರಿಲೀಸ್ ಮಾಡುತ್ತಿದೆ. ಸಿನಿಮಾದಲ್ಲಿ ಒಲವಿನ ಉಡುಗೊರೆ ಟೈಟಲ್ ಸಾಂಗ್‍ನ್ನು ಬಳಸಿಕೊಳ್ಳಲಾಗಿದೆಯಂತೆ. ಆ ಹಾಡನ್ನೇ ಬಿಡ್ತಾರಾ..? ಗೊತ್ತಿಲ್ಲ. ಅದು ಸಂಚಿತ್ ಹೆಗ್ಡೆ ಹಾಡಿರುವ ಹಾಡು ಎನ್ನುವುದಂತೂ ಪಕ್ಕಾ.
ಅಭಿಷೇಕ್ ಜೊತೆ ತಾನ್ಯಾ ಹೋಪ್ ನಾಯಕಿಯಾಗಿದ್ದಾರೆ. ದರ್ಶನ್, ರಚಿತಾ ರಾಮ್, ನಿರೂಪ್ ಭಂಡಾರಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್, ಚಿಕ್ಕಣ್ಣ, ಸಾಧುಕೋಕಿಲ ನಟಿಸಿರುವ ಸಿನಿಮಾದ ಹಾಡು ಆನಂದ್ ಆಡಿಯೋದಿಂದ ರಿಲೀಸ್ ಆಗುತ್ತಿದೆ. 20 ವರ್ಷದ ಸಂಭ್ರಮದಲ್ಲಿರೋ ಆನಂದ್ ಆಡಿಯೋಗೆ ಈ ಯುಗಾದಿ ತುಂಬಾ ಸ್ಪೆಷಲ್.