ಕೆಜಿಎಫ್ ಸಿನಿಮಾದ ಪ್ರಮುಖ ವಿಲನ್ ಗರುಡ. ಸಿನಿಮಾದಲ್ಲಿ ಗರಡು ಕೋಟ್ಯಧೀಶ್ವರ. ಆದರೆ, ರಿಯಲ್ ಲೈಫಲ್ಲಿ ಹಾಗೇನೂ ಇರಲಿಲ್ಲ. ಎಲ್ಲವನ್ನೂ ಬದಲು ಮಾಡಿದ್ದು ಕೆಜಿಎಫ್ ಸಿನಿಮಾ. ಗರುಡನ ಪಾತ್ರದಲ್ಲಿ ಯಶ್ ಎದುರು ಮಿಂಚಿದ್ದ ರಾಮಚಂದ್ರ ಈಗ ತಾನೇ ಫಾರ್ಚೂನರ್ ಕಾರ್‍ನ ಓನರ್ ಆಗಿದ್ದಾರೆ.
ಯಶ್ ಅವರ ಗೆಳೆಯನೂ ಆಗಿರುವ ರಾಮ್, ಹೊಸ ಕಾರು ಕೊಂಡ ತಕ್ಷಣ ಹೋಗಿದ್ದು ಯಶ್ ಹತ್ತಿರಕ್ಕೆ. ಯಶ್ ಮನೆಗೆ ಹೋಗಿ, ಕಾರು ತೋರಿಸಿ, ಜೊತೆಯಲ್ಲೊಂದು ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ದಾರೆ. ಗೆಳೆಯರ ಸಾಧನೆಗಳನ್ನು ನೋಡಿ ನೋಡಿ ಖುಷಿಯಾಗೋ ಯಶ್, ರಾಮ್‍ಗ ಶುಭ ಕೋರಿದ್ದಾರೆ.