ಕಿಚ್ಚ ಸುದೀಪ್ ಮತ್ತೊಮ್ಮೆ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ರಣ್, ಪೂಂಕ್, ರಕ್ತ ಚರಿತ್ರ ಚಿತ್ರಗಳಲ್ಲಿ ನಟಿಸಿದ್ದ ಸುದೀಪ್, ಈಗ ಸಲ್ಮಾನ್ ಚಿತ್ರದಲ್ಲಿ ಖಳನಾಯಕ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಸಲ್ಮಾನ್‍ರ ಟೈಗರ್ ಜಿಂದಾ ಹೈ ಚಿತ್ರದಲ್ಲೇ ಕಿಚ್ಚನ ದರುಶನವಾಗಬೇಕಿತ್ತು. ಡೇಟ್ಸ್ ಸಮಸ್ಯೆಯಿಂದಾಗಿ ಮಿಸ್ ಆಗಿತ್ತು.
ಈಗ ದಬಾಂಗ್ 3ಯಲ್ಲಿ ಸಲ್ಮಾನ್ ಎದುರು ನಟಿಸುತ್ತಿದ್ದಾರೆ ಸುದೀಪ್. ಸಲ್ಮಾನ್‍ಗೆ ಹೀರೋಯಿನ್ ಸೋನಾಕ್ಷಿ ಸಿನ್ಹಾ. ಡೈರೆಕ್ಟರ್ ಪ್ರಭುದೇವ. ಸಲ್ಮಾನ್‍ರ ಸೋದರ ಅರ್ಬಾಜ್ ಖಾನ್ ಕೂಡಾ ನಟಿಸುತ್ತಿರುವ ಚಿತ್ರದ ಶೂಟಿಂಗ್ ಶುರುವಾಗಿದೆ.