ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದಲ್ಲಿ ರಚಿತಾ ರಾಮ್ ಹಾಡಿ ಕುಣಿದು ಕುಪ್ಪಳಿಸೋಕೆ ರೆಡಿಯಾಗಿದ್ದಾರೆ. ಅರೆ.. ಆ ಚಿತ್ರದ ಹೀರೋಯಿನ್ ಶ್ರೀಲೀಲಾ ಅಲ್ವಾ ಅಂದ್ಕೋಬೇಡಿ. ಹೀರೋಯಿನ್ ಅವರೇ. ರಚಿತಾ ಹೆಜ್ಜೆ ಹಾಕೋದು ಹೀರೋ ಇಂಟ್ರೊಡಕ್ಷನ್ ಸಾಂಗ್‍ಗೆ.
ಭರಾಟೆ ಚಿತ್ರದ ಕಥೆ, ಹೀರೋನ ಫೋರ್ಸ್ ಎಲ್ಲವನ್ನೂ ಒಳಗೊಂಡಿರೋ ಹಾಡಿಗೆ ಒಬ್ಬರು ಜನಪ್ರಿಯ ನಾಯಕಿ ಬೇಕು ಎಂದು ಯೋಚಿಸಿದಾಗ ಹೊಳೆದಿದ್ದು ರಚಿತಾ ರಾಮ್ ಹೆಸರು. ಅವರ ಎಂಟ್ರಿ, ಚಿತ್ರದ ಎನರ್ಜಿ ಹೆಚ್ಚಿಸಿದೆ ಅಂದಿದ್ದಾರೆ ಭರ್ಜರಿ ಚೇತನ್.
ಶ್ರೀಮುರಳಿ ಜೊತೆ ರಥಾವರ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿರುವ ರಚಿತಾ ರಾಮ್, ಇತ್ತೀಚೆಗೆ ವಿಲನ್ ಚಿತ್ರದಲ್ಲಿ ಶಿವಣ್ಣನ ಜೊತೆ ಪುಟ್ಟ ಹಾಡಿಗೆ ಸ್ಟೆಪ್ ಹಾಕಿದ್ದರು. ಅದು ಬಿಟ್ಟರೆ ಈಗ ಭರಾಟೆಯಲ್ಲಿ ಸ್ಪೆಷಲ್ ಡ್ಯಾನ್ಸ್‍ಗೆ ಎಂಟ್ರಿ ಕೊಟ್ಟಿದ್ದಾರೆ.