ರಣಂ ಚಿತ್ರದ ದುರಂತಕ್ಕೆ ಕಾರಣ ಏನು..? ಇಬ್ಬರನ್ನು ಬಲಿ ಪಡೆದ ದುರಂತದಲ್ಲಿ ನಿರ್ಲಕ್ಷ್ಯ, ಉಡಾಫೆ, ಕಡಿಮೆ ಬಜೆಟ್‍ನಲ್ಲಿ ಮಾಡಿ ಮುಗಿಸುವ ಧಾವಂತವೇ ಎದ್ದು ಕಾಣುತ್ತಿದೆ. ಮೇಲ್ನೋಟಕ್ಕೆ ಕಾಣಿಸುತ್ತಿರುವುದು ಹಾಗೂ ಪೊಲೀಸರು ಹೇಳುತ್ತಿರುವುದು ಇದನ್ನೇ.
ಚಿತ್ರತಂಡ ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಹಾಗೆಯೇ ಚಿತ್ರೀಕರಣ ಮಾಡುತ್ತಿತ್ತು. ಸಾರ್ವಜನಿಕ ಸ್ಥಳದಲ್ಲಿ ಕಾರ್ ಸ್ಫೋಟಿಸಲು ಅನುಮತಿ ಕೇಳಿದ್ದರೂ ಕೊಡುತ್ತಿರಲಿಲ್ಲ. ಇದಕ್ಕೆ ಚಿತ್ರತಂಡದ ನಿರ್ಲಕ್ಷ್ಯವೇ ಕಾರಣ ಎನ್ನುವುದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರೇ ಹೇಳಿರುವ ಮಾತು.
ಘಟನೆ ಸಂಭವಿಸಿದ ಸ್ಥಳದಲ್ಲಿ ಟ್ರಾಫಿಕ್ ಕಡಿಮೆ. ವಾಹನಗಳು ಕಡಿಮೆ ಓಡಾಡುತ್ತವೆ. ಹೀಗಾಗಿಯೇ ಅನುಮತಿ ಪಡೆಯದೆ ಒಂದು ವಾರದಿಂದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಸುತ್ತಿತ್ತು ಚಿತ್ರತಂಡ.