` ಮಂಕಿ.. ಗಾಗಿ ತಲೆ ಬೋಳಿಸಿಕೊಂಡ ಡಾಲಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dhananjay goes bald for suri's next
Dhananjay

ಡಾಲಿ ಧನಂಜಯ್ ಪಾಪ್‍ಕಾರ್ನ್ ಟೈಗರ್ ಮಂಕಿ ಚಿತ್ರಕ್ಕಾಗಿ ತಲೆ ಬೋಳಿಸಿಕೊಂಡು ನಿಂತಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಧನಂಜಯ್ ಅವರ ಪಾತ್ರದ ಲುಕ್ ರಿವೀಲ್ ಆಗಿದೆ. ಗಡ್ಡ, ಮೀಸೆಯಿಲ್ಲದ ಬೋಳು ತಲೆ, ಬೋಳು ತಲೆಯ ಮೇಲೆ ರಕ್ತದಲ್ಲೇ ಇಂಗ್ಲಿಷ್‍ನಲ್ಲಿ  ಬರೆದಿರುವ ಮಂಕಿ, ಕಣ್ಣಿನಲ್ಲೇ ಕೆಂಡ ಕಾರುತ್ತಿರುವ ಧನಂಜಯ್ ರಗಡ್ ಆಗಿ ಕಾಣಿಸುತ್ತಿದ್ದಾರೆ. ಅಫ್‍ಕೋರ್ಸ್.. ಎಷ್ಟೆಂದರೂ ಅದು ಸೂರಿ ಸಿನಿಮಾ.

ಕೆ.ಎಂ. ಸುಧೀರ್ ನಿರ್ಮಾಣದ ಚಿತ್ರದಲ್ಲಿ ನಿವೇದಿತಾ ನಾಯಕಿ. ಆದರೆ, ಅಚ್ಚರಿ ಅದಲ್ಲ, ಧನಂಜಯ್ ಕೈತುಂಬಾ ಚಿತ್ರಗಳು ತುಂಬಿಕೊಂಡಿವೆ. ಯುವರತ್ನ, ಪೊಗರು, ಡಾಲಿ, ಸಲಗ ಚಿತ್ರಗಳ ಚಿತ್ರೀಕರಣ ಇನ್ನೂ ಆಗಿಲ್ಲ. ಅವೆಲ್ಲವನ್ನೂ ಬದಿಗಿಟ್ಟು ಗೆಟಪ್ ಬದಲಿಸಿಕೊಂಡಿದ್ದಾರೆ ಡಾಲಿ ಧನಂಜಯ್.