ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಅನ್ನೋ ಸಿನಿಮಾ ಬಂದಿದ್ದು 2018ರ ಆರಂಭದಲ್ಲಿ. ಕಂಗ್ಲಿಷ್ ಮಿಶ್ರಿತ ಸಂಭಾಷಣೆ, ರಾಜಕೀಯ ವಿಡಂಬನೆ ಎಲ್ಲವೂ ಇದ್ದ ನೊಗ್ರಾಜ್ನನ್ನು ಜನ ಮೆಚ್ಚಿದ್ದರು. ಗಲ್ಲಾ ಪೆಟ್ಟಿಗೆಯೂ ತುಂಬಿತ್ತು. ಮಾಮೂಲಿ ಜಾನರ್ನಿಂದ ಹೊರಗಿದ್ದ ಆ ಚಿತ್ರದ ಸೀಕ್ವೆಲ್ ರೆಡಿಯಾಗುತ್ತಿದೆ. ಹೌದು, ಅದನ್ನ ಹೇಳಿರೋದು ವಿಧೇಯ ರಾಜಕಾರಣಿಯಾಗಿ ನಟಿಸಿ, ಕನ್ನಡಿಗರ ಮನಸ್ಸು ಗೆದ್ದಿದ್ದ ಡ್ಯಾನಿಶ್ ಸೇಠ್. ಸೀಕ್ವೆಲ್ ಸ್ಕ್ರಿಪ್ಟ್ ಆಗಿದೆ ಎಂದಿದ್ದಾರೆ ಡ್ಯಾನಿಶ್.
ಮುಂದಾ.. ಆಗ ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಚಿತ್ರವನ್ನು ನಿರ್ಮಿಸಿದ್ದರು. ಸೀಕ್ವೆಲ್ನ್ನೂ ಅವರೇ ನಿರ್ಮಾಣ ಮಾಡ್ತಾರಾ..? ಸ್ವಲ್ಪ ದಿನ ವೇಯ್ಟ್ ಮಾಡಿ.