` ರಾಜಕೀಯ ಹಿಂಸೆಗೆ ಕಂಗಾಲಾದ ಯೋಗರಾಜ್ ಭಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yogaraj bhat upset over his lyrics being misused
Yogaraj Bhat

ಯೋಗರಾಜ್ ಭಟ್ಟರು ಬಿಡುವಾಗಿಯೇನೂ ಇಲ್ಲ. ಪಂಚತಂತ್ರ ಚಿತ್ರದ ರಿಲೀಸ್‍ನಲ್ಲಿ ಬ್ಯುಸಿಯಾಗಿದ್ದಾರೆ. ಗಾಳಿಪಟ-2ಗೆ ರೆಡಿಯಾಗುತ್ತಿದ್ದಾರೆ. ಇದೆಲ್ಲದರ ಮಧ್ಯೆ ಬೇರೆ ನಿರ್ದೇಶಕರ ಚಿತ್ರಗಳಿಗೆ ಹಾಡು, ಪುಟ್ಟ ಪುಟ್ಟ ಪಾತ್ರಗಳಲ್ಲಿ ಬಿಡುವಿಲ್ಲದ ಜೀವನ ಅವರದ್ದು. ಅಂತಹವರಿಗೂ ಈ ರಾಜಕೀಯ ಸುಮ್ಮನೆ ಬಿಟ್ಟಿಲ್ಲ. ಹಿಂಸೆ ಕೊಟ್ಟಿದೆ.

ಎಲ್ಲರಿಗೂ ಗೊತ್ತಿರೋ ಹಾಗೆ ಭಟ್ಟರ ಮಾತಿನಲ್ಲಿ ಹಾಸ್ಯ, ವಿಡಂಬನೆ, ಸಣ್ಣದೊಂದು ಕೊಂಕು, ದೊಡ್ಡದೊಂದು ಸಂದೇಶ ಎಲ್ಲವೂ ಇರುತ್ತೆ. ಅಂತಹ ತಮಾಷೆ, ಗಾದೆಗಳನ್ನು ಸೃಷ್ಟಿಸೋದ್ರಲ್ಲಿ ಭಟ್ಟರ್ ಎಕ್ಸ್‍ಪರ್ಟ್. ಆದರೆ, ಆ ಪದ, ಸಾಲುಗಳನ್ನೇ ಕೆಲವು ರಾಜಕೀಯ ಪಕ್ಷಗಳು ತಮ್ಮದೆಂಬಂತೆ ಬಿಂಬಿಸುತ್ತಿವೆ. ಭಟ್ಟರಿಗೆ ಹಿಂಸೆಯಾಗಿರುವುದು ಇದೇ..

ಹೀಗಾಗಿಯೇ ಭಟ್ಟರು ತಾವು ಯಾವುದೇ ಪಕ್ಷ, ಜಾತಿ, ಧರ್ಮ, ಎಡ, ಬಲಕ್ಕೆ ಸೇರಿದವನಲ್ಲ. ನನ್ನ ರಾಜಕೀಯ ನಿರ್ಲಿಪ್ತತೆಯನ್ನು ಕಾಪಾಡಿ ಎಂದು ಪ್ರಾರ್ಥಿಸಿದ್ದಾರೆ.